ನವದೆಹಲಿ:ಭಾರತ್‌ಪೆ ಕಂಪನಿಯ ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರ ಪತ್ನಿ ಹಾಗೂ ಕಂಪನಿಯ ಹೆಡ್ ಆಫ್ ಕಂಟ್ರೋಲ್ಸ್ ಮುಖ್ಯಸ್ಥೆ ಮಾಧುರಿ ಜೈನ್ ಅವರನ್ನ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಮಾಧುರಿ ಜೈನ್ ಗ್ರೋವರ್ ಹಣಕಾಸಿನ ವಿಚಾರದಲ್ಲಿ ಅಕ್ರಮ ಎಸಗಿರೋ ಹಾಗೂ ನಕಲಿ ಇನ್‌ವಾಯ್ಸ್ ಸಲ್ಲಿಸಿರೋ ಆರೋಪದ ಮೇಲೆನೆ ಭಾರತ್‌ಪೆ ಕಂಪನಿಯ ಮಾಧುರಿ ಜೈನ್ ವಜಾಗೊಂಡಿದ್ದಾರೆ.
ಮಾಧುರಿ ಜೈನ್ ತಮ್ಮ ಕುಟುಂಬದವರೊಂದಿಗೆ ದುಬೈ ಮತ್ತು ಅಮೆರಿಕ ಪ್ರವಾಸಕ್ಕೆ ಹೋಗಿದ್ದರು. ಈ ಪ್ರವಾಸದ ವೆಚ್ಚವನ್ನೂ ಭಾರತ್‌ಪೆ ಕಂಪನಿಯ ಹೆಸರಿನಲ್ಲಿಯೇ ಹಚ್ಚಿರೋ ಆರೋಪ ಇದೆ.
PublicNext
24/02/2022 10:11 am