ಮನೆಗೆಲಸದವರನ್ನ ಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಅವರು ಎಷ್ಟೇ ಪ್ರಾಮಾಣಿಕರಾಗಿದ್ರೂ ಸರಿಯೇ. ಅವರ ಸಂಭಾವನೆ ಏರಿಸೋದು ಕಡಿಮೇನೆ. ಆದರೆ ಐಡಿಎಫ್‌ಸಿ ಖಾಸಗಿ ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಓ ವಿ.ವೈದ್ಯನಾಥನ್ ತಮ್ಮ ಮನೆಗೆಲಸದವರಿಗೆ 9 ಲಕ್ಷದ ಷೇರುಗಳನ್ನ ಹಂಚಿದ್ದಾರೆ.
ಹೌದು.! ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿ, ಕಾರ್ ಡ್ರೈವರ್,ಫಿಟ್ನೆಸ್ ತರಬೇತುದಾರ,ಸೇರಿದಂತೆ ನಿತ್ಯವೂ ತಮಗೆ ಹೆಲ್ಪ್ ಮಾಡುವವರಿಗೆ ಐದು ಭಾಗಗಳಾಗಿ ವಿಂಗಡಿಸಿ 9 ಲಕ್ಷದ ಷೇರ್‌ಗಳನ್ನ ಹಂಚಿದ್ದಾರೆ. ಇದರ ಒಟ್ಟು ಮೌಲ್ಯ 3.95 ಕೋಟಿ ಆಗುತ್ತದೆ. ಅಲ್ಲಿಗೆ ಎಂ.ಡಿ.ವೈದ್ಯನಾಥನ್ ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
PublicNext
22/02/2022 06:10 pm