ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಸಾರ್ವಜನಿಕರೂ ಎಲ್‌ಐಸಿ ಷೇರು ಖರೀದಿಸಬಹುದೇ ?

ನವದೆಹಲಿ: ಕೇಂದ್ರ ಸರ್ಕಾರದ ಜೀವ ವಿಮಾ ನಿಗಮದ ಷೇರನ್ನ ಇನ್ಮುಂದೆ ಸಾರ್ವಜನಿಕರು ಖರೀದಿಸಬಹುದು. ಈ ಐಪಿಓ ಪ್ರಕ್ರಿಯೆ ಇದೇ ಮಾರ್ಚ್ 11 ರಿಂದ ಶುರುವಾಗೋ ಸಾಧ್ಯತೆ ಇದೆ.

ಈ ಒಂದು ಐಪಿಓ ಪ್ರಕ್ರಿಯೆ ಮೂಲಕ ಕೇಂದ್ರ ಸರ್ಕಾರ 60 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಉದ್ದೇಶ ಹೊಂದಿದೆ. ವಿಶೇಷ ಅಂದ್ರೆ ಈ ಐಪಿಓಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಿಂದ ಮಾರ್ಚ್ ಮೊದಲವಾರದಲ್ಲಿಯೇ ಅನುಮತಿ ಸಿಗೋ ನಿರೀಕ್ಷೆ ಇದೆ.

ಇದಾದ ಬಳಿಕವೇ ಎಲ್‌ಐಸಿ ಷೇರುಗಳ ಬೆಲೆ ಎಷ್ಟು ಅನ್ನೋದು ತಿಳಿಯಲಿದೆ. ಆದರೆ ಈ ಬಗ್ಗೆ ಎಲ್‌ಐಸಿ ಇನ್ನೂ ಅಧಿಕೃತ ಮಾಹಿತಿ ಕೊಟ್ಟಿಲ್ಲ.ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

18/02/2022 07:12 pm

Cinque Terre

49.61 K

Cinque Terre

0