ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏರ್‌ ಇಂಡಿಯಾ ಸಿಇಒ ಆಗಿ ಟರ್ಕಿಯ ಇಲ್ಕ್ಯಾಶ್ ಈಸೈ ನೇಮಕ

ನವದೆಹಲಿ: ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಟರ್ಕಿ ಮೂಲದ ಇಲ್ಕ್ಯಾಶ್ ಈಸೈ ಅವರನ್ನು ಟಾಟಾ ಸನ್ಸ್‌ ನೇಮಕ ಮಾಡಿದೆ.

ಇತ್ತೀಚಿನವರೆಗೂ ಟರ್ಕಿಷ್‌ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ 51 ವರ್ಷ ವಯಸ್ಸಿನ ಇಲ್ಕ್ಯಾಶ್ ಈಸೈ, ಏಪ್ರಿಲ್‌ 1 ಅಥವಾ ಅದಕ್ಕೂ ಮುಂಚೆಯೇ 'ಏರ್ ಇಂಡಿಯಾದ' ಹೊಣೆಗಾರಿಕೆ ವಹಿಸಲಿದ್ದಾರೆ. ಟಾಟಾ ಸನ್ಸ್‌ ಅಡಿಯಲ್ಲಿ ಏರ್‌ ಇಂಡಿಯಾಗೆ ಇಲ್ಕ್ಯಾಶ್ ಮೊದಲ ಸಿಇಒ ಮತ್ತು ಎಂಡಿ ಆಗಲಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಏರ್‌ ಇಂಡಿಯಾ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್ ವಿಶೇಷ ಆಹ್ವಾನದ ಮೇರೆಗೆ ಸಭೆಯಲ್ಲಿ ಭಾಗಿಯಾಗಿದ್ದರು.

Edited By : Vijay Kumar
PublicNext

PublicNext

14/02/2022 09:47 pm

Cinque Terre

47.16 K

Cinque Terre

2

ಸಂಬಂಧಿತ ಸುದ್ದಿ