ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ್ಯೂಯಾರ್ಕ್‌ನ ಪ್ರೀಮಿಯಂ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಮ್ಯಾಂಡರಿನ್ ಓರಿಯಂಟಲ್ ಅನ್ನು 729 ಕೋಟಿ ರೂ. ಪಾವತಿಸಿ ಖರೀದಿಸಿದೆ.
2003ರಲ್ಲಿ ಆರಂಭವಾದ ಮ್ಯಾಂಡರಿನ್ ಓರಿಯೆಂಟಲ್ ನ್ಯೂಯಾರ್ಕ್‌ನಲ್ಲಿ ನೆಲೆಗೊಂಡಿರುವ ಐಕಾನಿಕ್ ಐಷಾರಾಮಿ ಹೋಟೆಲ್ ಆಗಿದ್ದು, ಇದು 80-ಕೊಲಂಬಸ್ ಸರ್ಕಲ್ ಪಕ್ಕದಲ್ಲಿದೆ. ಅಲ್ಲದೇ ಈ ಹೋಟೆಲ್ ಜಾಗತಿಕ ಮನ್ನಣೆಯನ್ನು ಸಹ ಹೊಂದಿದೆ ಮತ್ತು AAA ಫೈ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ, ಡೈಮಂಡ್ ಹೋಟೆಲ್, ಫೋರ್ಬ್ಸ್ ಫೈವ್ ಸ್ಟಾರ್ ಹೋಟೆಲ್, ಮತ್ತು ಫೋರ್ಬ್ಸ್ ಫೈವ್ ಸ್ಟಾರ್ ಸ್ಪಾ ಪ್ರಶಸ್ತಿಗಳು ಸಹ ಸೇರಿದೆ.
ಈ ಹೋಟೆಲ್ ಖರೀದಿಸುತ್ತಿರುವ ವಿಷಯವನ್ನು ರಿಲಯನ್ಸ್ ಕಂಪನಿಯು ಷೇರುಪೇಟೆಗೆ ತಿಳಿಸಿದೆ. 2021ರ ಏಪ್ರಿಲ್‌ನಲ್ಲಿ ರಿಲಯನ್ಸ್ ಕಂಪನಿಯು ಐಷಾರಾಮಿ ಹೋಟೆಲ್, ಸ್ಪಾ, ಗಾಲ್ಫ್ ಕ್ಲಬ್ ಸೌಲಭ್ಯ ಇರುವ ಬ್ರಿಟನ್ನಿನ ಸ್ಟೋಕ್ ಪಾರ್ಕ್ ಲಿಮಿಟೆಡ್‌ಅನ್ನು ಖರೀದಿಸಿತ್ತು.
PublicNext
10/01/2022 07:34 am