ಹಾಸನ: ಡಿ.28 ರಿಂದ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿರುವುದರಿಂದ ಸರ್ಕಾರದ ಈ ಕ್ರಮಕ್ಕೆ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಅಸಹಾಯಕತೆ ಹೊರ ಹಾಕಿದ್ದಾರೆ.
ಹೊಸ ವರ್ಷಕ್ಕೆ ಮುಂಚಿತವಾಗಿ ಬುಕ್ಕಿಂಗ್‌ಗೆ ನೀಡಿದ್ದ ಹಣವನ್ನು ಗ್ರಾಹಕರು ವಾಪಸ್ ಕೇಳುತ್ತಿದ್ದಾರೆ
ಇದ್ರಿಂದ ಅನಿವಾರ್ಯವಾಗಿ ಹಣ ವಾಪಸ್ ನೀಡಬೇಕಾದ ಸ್ಥಿತಿ ಮಾಲೀಕರದ್ದು, ಎರಡು ವರ್ಷದಿಂದ ಬ್ಯುಸಿನೆಸ್ ಇಲ್ಲದೆ ನಲುಗಿ ಹೋಗಿದ್ದೇವೆ, ಈಗ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ, ಈಗಾಗಲೇ ನ್ಯೂ ಇಯಿರ್ ಸೆಲಬ್ರೇಷನ್ ರೆಡಿ ಮಾಡಿಕೊಂಡಿದ್ದೇವೆ.ಅಡ್ವಾನ್ಸ್ ತಗೊಂಡು ಬುಕ್ಕಿಂಗ್ ಮಾಡಿಕೊಂಡಿದ್ದೇವೆ, ಈಗ ಏನು ಮಾಡುವುದು ಗೊತ್ತಾಗ್ತಿಲ್ಲಾ ಎಂದು ಕಂಗಾಲಾಗಿದ್ದಾರೆ.
ಲೋನ್ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ಕೊಡಬೇಕು, ಸರ್ಕಾರದ ಈ ಗೈಡ್ ಲೈನ್ಸ್ ನಿಂದ ಏನ್ ಮಾಡುವುದು ಗೊತ್ತಾಗುತ್ತಿಲ್ಲ, ಈ ಬ್ಯುಸಿನೆಸ್ ಬಿಟ್ಟು ಬೇರೆ ಮಾಡೋಣ ಅಂದರೆ ಇದಕ್ಕೆ ಸಾಲ ಮಾಡಿ ಬಂಡವಾಳ ಹಾಕಿದ್ದೀವಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
PublicNext
28/12/2021 02:35 pm