ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ : ಸ್ಕಾಚ್, ವಿಸ್ಕಿ ಬೆಲೆ ಅರ್ಧ ಕಮ್ಮಿ ಎಲ್ಲಿ?

ಮುಂಬೈ: ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ. ಬೆಲೆ ಏರಿಕೆಯಿಂದ ಜನ ಜೀವನ ಕಷ್ಟವಾಗುತ್ತಿದೆ.

ಇದರ ಮಧ್ಯೆ ಮಹಾರಾಷ್ಟ್ರ ಸರ್ಕಾರ ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು ಸ್ಕಾಚ್, ವಿಸ್ಕಿ ಬೆಲೆಗಳಲ್ಲಿ ಅರ್ಧಕ್ಕಷ್ಟು ಕಮ್ಮಿಯಾಗಲಿವೆ. ಮಹಾರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳುವ ಸ್ಕಾಚ್, ವಿಸ್ಕಿಯ ಬೆಲೆಯನ್ನು ಇತರ ರಾಜ್ಯಗಳಿಗೆ ಸರಿಸಮನಾಗಿ ತರಲು ಈ ಒಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇವುಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದೆ.

1000 ಮಿಲಿ ಆಮದು ಮಾಡಿದ ಸ್ಕಾಚ್ ವಿಸ್ಕಿ ಬಾಟಲಿಯ ಬೆಲೆ ಕನಿಷ್ಠ ರೂ 5,800 ರಿಂದ ಗರಿಷ್ಠ ರೂ 14 ಸಾವಿರ ಇರುತ್ತದೆ. ಇದರ ಬೆಲೆ ಈಗ ಕನಿಷ್ಠ ಶೇಕಡಾ 35 ರಿಂದ 40ರಷ್ಟು ಕಡಿಮೆಯಾಗಲಿದೆ ಎಂದು ಮಹಾರಾಷ್ಟ್ರ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇತರ ರಾಜ್ಯಗಳಿಂದ ಸ್ಕಾಚ್ ಕಳ್ಳಸಾಗಣೆ ಮತ್ತು ನಕಲಿ ಮದ್ಯ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

22/11/2021 10:01 pm

Cinque Terre

62.18 K

Cinque Terre

8

ಸಂಬಂಧಿತ ಸುದ್ದಿ