ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೈಲ ಬೆಲೆ ಏರಿಕೆ : ಜೀವನ ನಡೆಸುವುದೇ ದುಸ್ತರ

ನವದೆಹಲಿ: ಪೈಸೆ ಲೆಕ್ಕದಲ್ಲಿ ಪೆಟ್ರೋಲ್ ಡಿಸೇಲ್ ದರ ಏರಿಕೆ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತಿದೆ. ದುಡಿಮೆಯ ಅರ್ಧದಷ್ಟು ಹಣವನ್ನು ಪೆಟ್ರೋಲ್,ಡಿಸೇಲ್ ಗಾಗಿ ವ್ಯಯಿಸುತ್ತಿರುವ ಜನ ನಿತ್ಯ ಸರ್ಕಾಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸದ್ಯ ಸತತ 4ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ 35 ಪೈಸೆಗಳಷ್ಟು ಹೆಚ್ಚಿಸಲಾಗಿದೆ.

ಸ್ಥಳೀಯ ಮಾರಾಟ ತೆರಿಗೆಗಳನ್ನು ಪರಿಗಣಿಸಿದಾಗ ಇಂಧನ ದರ ರೂ. 120ರ ಗಡಿ ದಾಟಿದ ರಾಜ್ಯಗಳ ಸಾಲಿಗೆ ಈಗ ಮಧ್ಯಪ್ರದೇಶವೂ ಸೇರಿದೆ. ರಾಜ್ಯದ ಪನ್ನಾ, ಸಾತ್ನಾ, ರೇವಾ, ಶಾದೂಲ್, ಛಿಂದ್ವಾರ ಹಾಗೂ ಬಾಲಾಘಾಟ್ಗಳಲ್ಲಿ ಪ್ರತಿ ಲೀಟರ್ ದರ ರೂ. 120 ದಾಟಿದೆ.

ರಾಜಸ್ಥಾನದ ಗಂಗಾನಗರ ಹಾಗೂ ಹನುಮಾನ್ ಗಡ ಪಟ್ಟಣಗಳಲ್ಲಿ ಇಂಧನ ದರ ದೇಶದಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ.

ಗಂಗಾನಗರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ನ ಪ್ರತಿ ಲೀಟರ್ ದರ ಕ್ರಮವಾಗಿ ರೂ. 121.52 ಹಾಗೂ ರೂ. 112.44 ಇದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ. 109.34, ಪ್ರತಿ ಲೀಟರ್ ಡೀಸೆಲ್ ದರರೂ. 98.07 ತಲುಪಿದೆ. ಮುಂಬೈನಲ್ಲಿ ಕ್ರಮವಾಗಿ ರೂ. 115.15 ಹಾಗೂ ರೂ. 106.23 ತಲುಪಿದೆ.

Edited By : Nirmala Aralikatti
PublicNext

PublicNext

31/10/2021 01:26 pm

Cinque Terre

56.97 K

Cinque Terre

8

ಸಂಬಂಧಿತ ಸುದ್ದಿ