ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬ್ಬದ ಸಂಭ್ರಮ ಕಿತ್ತುಕೊಂಡ ಬೆಲೆ ಏರಿಕೆ: ಹೂ-ಹಣ್ಣು, ತರಕಾರಿ ದುಬಾರಿ

ಬೆಂಗಳೂರು: ನಾಡಿನ ಜನತೆ ನಾಡಹಬ್ಬದ ಸಂಭ್ರಮದಲ್ಲಿದ್ದಾರೆ. ಆದ್ರೆ ಬೆಲೆ ಏರಿಕೆ ಬಿಸಿ ಜನರ ಸಂಭ್ರಮವನ್ನು ಕಳೆಗುಂದುವಂತೆ ಮಾಡಿದೆ. ಹಬ್ಬಕ್ಕೆ ಅಗತ್ಯವಾದ ಹೂ-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇನ್ನೊಂದೆಡೆ ತರಕಾರಿ ಬೆಲೆ ಹಾಗೂ ದಿನಸಿ ಸಾಮಗ್ರಿ ಬೆಲೆಯಂತೂ ಇದಕ್ಕೂ ಮುನ್ನವೇ ಏರಿಕೆಯಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹಬ್ಬ ಗೌಣವಾಗಿದೆ

ಈ ನಡುವೆ ಇಂದು ರಾಜ್ಯದ ನಾನಾ ನಗರಗಳಲ್ಲಿ ಡಿಸೇಲ್‌ ಬೆಲೆಯಲ್ಲಿ ಹೆಚ್ಚಳ ಕಂಡಿದ್ದು, ಹಲವು ಜಿಲ್ಲೆಗಳಲ್ಲಿ ನೂರು ರೂಗಳ ಗಡಿಯನ್ನು ದಾಟಿದೆ. ಪೆಟ್ರೋಲ್‌ ಬೆಲೆ ಏರಿಕೆ ಬೆನ್ನಲೇ ಡಿಸೇಲ್‌ ಬೆಲೆಯಲ್ಲೂ ಕೂಡ ಹೆಚ್ಚಳ ಕಂಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಒಟ್ಟಿನಲ್ಲಿ ಪ್ರತಿ ನಿತ್ಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಜನರಲ್ಲಿ ಬೇಸರ ಮೂಡಿಸಿರುವುದು ಸುಳ್ಳಲ್ಲ.

Edited By : Nagaraj Tulugeri
PublicNext

PublicNext

11/10/2021 07:59 am

Cinque Terre

48.21 K

Cinque Terre

3

ಸಂಬಂಧಿತ ಸುದ್ದಿ