ನವದೆಹಲಿ: ಅಮೆಜಾನ್ನ ಸಹಸಂಸ್ಥಾಪಕ ಜೆಫ್ ಬೆಜೋಸ್ ಅವರಿಗೆ '2' ಅಂಕಿಯ ದೈತ್ಯ ಪ್ರತಿಮೆ ಹಾಗೂ ಬೆಳ್ಳಿ ಪದಕ ಕಳಿಸಿದ್ದೇನೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗೇಲಿ ಮಾಡಿದ್ದಾರೆ
ಹೌದು. ಜೆಫ್ ಬೆಜೋಸ್ ಅವರನ್ನು ಎಲಾನ್ ಮಸ್ಕ್ ಮತ್ತೊಮ್ಮೆ ಹಿಂದಿಕ್ಕಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದೇ ವಿಚಾರವಾಗಿ ಮಸ್ಕ್ ಅವರು ಜೆಫ್ ಬೆಜೋಸ್ರ ಕಾಲೆಳೆದಿದ್ದಾರೆ.
ಫೋರ್ಬ್ಸ್ ಪ್ರಕಾರ, ಎಲಾನ್ ಮಸ್ಕ್ ಅವರು 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಮೂಲಕ ಸೋಮವಾರ ವಿಶ್ವದ ಮೂರನೇ ವ್ಯಕ್ತಿಯಾದರು. ಇದಕ್ಕೆ ಪ್ರತಿಕ್ರಿಯೆಯಾಗಿ, "ಫೋರ್ಬ್ಸ್ನ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಜೆಫ್ ಬೆಜೋಸ್ ಎಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ಜ್ಞಾಪಿಸಲು ಬೆಳ್ಳಿಯ ಪದಕದೊಂದಿಗೆ '2' ಅಂಕಿಯ ದೈತ್ಯ ಪ್ರತಿಮೆಯನ್ನು ನಾನು ಕಳುಹಿಸುತ್ತಿದ್ದೇನೆ" ಎಂದು ಮಸ್ಕ್ ಹೇಳಿದ್ದಾರೆ.
PublicNext
29/09/2021 05:01 pm