ಕೋವಿಡ್ ನಂತರ ಉದ್ಯೋಗ ರಂಗದಲ್ಲಿ ಹಲವಾರು ಏರಿಳಿತಗಳು ಉಂಟಾಗಿದ್ದು, ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಅದರಲ್ಲೂ ಭಾರತದಲ್ಲಿ ಪ್ರಸ್ತುತ ಐಟಿ ಉದ್ಯಮಗಳಲ್ಲಿ 400%ನಷ್ಟು ಏರಿಕೆಯಾಗಿದ್ದು ಇದಕ್ಕೆ ಕಾರಣವಾಗಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿನ ಮಹತ್ತರ ಬದಲಾವಣೆಗಳು ಎಂಬುದಾಗಿ ನೇಮಕಾತಿ ದತ್ತಾಂಶ ವಿವರಗಳು ಸೂಚಿಸಿವೆ. ಕ್ಲೌಡ್ ಕಂಪ್ಯೂಟಿಂಗ್, ಮಶಿನ್ ಲರ್ನಿಂಗ್, ಡಿಸೈನ್, ರೀಸರ್ಚ್ ಹಾಗೂ ಡೆವಲಪ್‌ಮೆಂಟ್, ಅನಾಲಿಟಿಕ್ಸ್ ಹೀಗೆ ಈ ಕ್ಷೇತ್ರದಲ್ಲಿ ಅತ್ಯುತ್ತಮ ಬುದ್ಧಿಮತ್ತೆ ಕೌಶಲ್ಯಗಳನ್ನು ಹೊಂದಿರುವವರಿಗೆ ಐಟಿ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚುತ್ತಿದ್ದು ಬ್ಯಾಂಕಿಂಗ್, ಆರ್ಥಿಕ ಸೇವೆಗಳು ಹಾಗೂ ಇನ್ಶೂರೆನ್ಸ್ (ಬಿಎಫ್‌ಎಸ್‌ಐ) ಉದ್ಯಮದಿಂದ ಪ್ರೇರಣೆಗೊಂಡ ಒತ್ತಡದಿಂದಾಗಿ ಐಟಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂಬುದಾಗಿ ಅಂಕಿಅಂಶಗಳು ತಿಳಿಸಿವೆ.
ಮಶಿನ್ ಲರ್ನಿಂಗ್, ಡಿಸೈನ್, ರೀಸರ್ಚ್ ಹಾಗೂ ಡೆವಲಪ್‌ಮೆಂಟ್, ಫುಲ್ ಸ್ಟಾಕ್ ಡೆವಲಪರ್ ಹೀಗೆ ಮೊದಲಾದ ಕ್ಷೇತ್ರಗಳಲ್ಲಿ ಕಳೆದ ತ್ರೈಮಾಸಿಕದಿಂದ ಉದ್ಯಾಗವಕಾಶದಲ್ಲಿ ಹೆಚ್ಚಳ ಕಂಡುಬರುತ್ತಿದ್ದು ಉದ್ಯೋಗಿಗಳಿಗೆ ಇದು ಸುವರ್ಣವಕಾಶವಾಗಿದೆ ಎಂದು ಬಿಸ್‌ನೆಸ್ ಪ್ರೊವೈಡರ್ ಡೇಟಾ ತಿಳಿಸಿದೆ. ಇಷ್ಟೇ ಅಲ್ಲದೆ ಗೇಮಿಂಗ್, DevOps (ಬ್ಯಾಂಬೂ, ಜೀರಾ) ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ (ಸೇಲ್ಸ್‌ಫೋರ್ಸ್, SAP HANA) ನಲ್ಲೂ ಬೇಡಿಕೆ ಹೆಚ್ಚಿರುವುದಾಗಿ ತಿಳಿದುಬಂದಿದೆ.
ಭಾರತದಾದ್ಯಂತ ನೇಮಕಾತಿ ಚಟುವಟಿಕೆಗಳಿಗೆ ಮೊದಲ ಆದ್ಯತೆ ಇರುವುದೇ ಐಟಿ ಕ್ಷೇತ್ರಗಳಾದ ಬೆಂಗಳೂರು, ಹೈದ್ರಾಬಾದ್ ಹಾಗೂ ಪುಣೆ ನಂತರ ಚೆನ್ನೈ, ಮುಂಬೈ, ಎನ್‌ಸಿಆರ್ ಹಾಗೂ ಪ್ರಮುಖ ನಗರಗಳಾಗಿವೆ. ಈ ಪಟ್ಟಿಯಲ್ಲಿ ಬೆಂಗಳೂರು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು (40%) ,ನಂತರ ಸ್ಥಾನ ಹೈದ್ರಾಬಾದ್ (18%) ಹಾಗೂ ಪುಣೆ (18%) ನಗರಗಳಿಗಿವೆ.
ಇನ್ನು ಕೌಶಲ್ಯ ಆಧಾರಿತ ನೇಮಕಾತಿಯಲ್ಲಿ ಬೆಂಗಳೂರು, ಕ್ಲೌಡ್ ಟೆಕ್ ಡೆವಲಪರ್‌ಗಳಿಗೆ (41%) ಪ್ರಮುಖ ಬೇಡಿಕೆ ಪಡೆದುಕೊಂಡಿದ್ದರೆ ರಿಯಾಕ್ಟ್ ಜೆಎಸ್ ಡೆವಲಪರ್‌ಗಳಿಗೆ (44%) ಮತ್ತು ಆ್ಯಂಡ್ರಾಯ್ಡ್ ಡೆವಲಪರ್‌ಗಳಿಗೆ (81%) ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂಬುದನ್ನು ಸೂಚಿಸುತ್ತದೆ.
ಇನ್ನು ಫುಲ್ ಸ್ಟಾಕ್ ಡೆವಲಪರ್‌ಗಳಿಗೆ ಬೆಂಗಳೂರಿನಲ್ಲಿ ಸಮನಾದ ಬೇಡಿಕೆ ಇದ್ದು 42% ಇದೆ. ಹೈದ್ರಾಬಾದ್ 37% ಬೇಡಿಕೆ ಹೊಂದಿದೆ. ಇನ್ನು ಆ್ಯಂಗ್ಯುಲರ್ ಜೆಎಸ್ ಡೆವಲಪರ್‌ಗಳಿಗೆ ಹೈದ್ರಾಬಾದ್ (25%) ಬೆಂಗಳೂರು (21%), ಗುರುಗ್ರಾಮ್ (21%), ಚೆನ್ನೈ (16%) ಹಾಗೂ ಪುಣೆ (13%) ಬೇಡಿಕೆ ಇರುವುದಾಗಿ ತಿಳಿದುಬಂದಿದೆ.
ಪ್ರಸ್ತುತ ಡೇಟಾ ವರದಿಗಳನ್ನು ಕಂಪನಿಯ ಅಪ್ಲಿಕೇಶನ್ ಟ್ರ್ಯಾಕಿಂಗ್ ಸಿಸ್ಟಮ್‌ನಲ್ಲಿ ರಚಿಸಲಾಗಿರುವ ಅಲ್ಗಾರಿದಮ್‌ನಿಂದ ಪಡೆದುಕೊಳ್ಳಲಾಗಿದ್ದು ಈ ಡೇಟಾಗಳನ್ನು ಮಾರ್ಚ್-ಆಗಸ್ಟ್ 2021 ರೊಂದಿಗೆ ಹೋಲಿಕೆ ಮಾಡಿದಾಗ ಅಕ್ಟೋಬರ್-ಮಾರ್ಚ್ 2020-2021ರ ಕಾಲಾವಧಿಯ ಸ್ಥಾನಗಳವರೆಗೆ ಹೊಂದಿಕೆಯಾಗುತ್ತದೆ.
ಐಟಿ ಕ್ಷೇತ್ರಗಳಲ್ಲಿ ನೇಮಕಾತಿ ಮೂಲಕ್ಕೆ ಹೆಸರುವಾಸಿಯಾಗಿರುವುದೇ ಬೆಂಗಳೂರಾಗಿದ್ದು ಹೆಚ್ಚಿನ ಐಟಿ ಕಂಪನಿಗಳು ನಗರದಲ್ಲಿ ತಲೆ ಎತ್ತಿದ್ದು ಐಟಿ ಉದ್ಯೋಗಿಗಳಿಗೆ ವಿಪುಲ ಅವಕಾಶ ನೀಡುತ್ತಿದೆ. ಬೆಂಗಳೂರು ಐಟಿ ಕ್ಷೇತ್ರದ ಉದ್ಯೋಗವಕಾಶಗಳಲ್ಲಿ ಗಳಿಸಿರುವ ಶೇಕಡಾವಾರನ್ನು ಗಮನಿಸಿದಾಗಲೇ ಐಟಿ ಕ್ಷೇತ್ರದಲ್ಲಿ ಬೆಂಗಳೂರು ಮೊದಲಿರುವುದು ಖಾತ್ರಿಯಾಗುತ್ತದೆ.
ಕೃಪೆ: ನ್ಯೂಸ್ 18
PublicNext
16/09/2021 10:16 pm