ನವದೆಹಲಿ: ಭಾರತೀಯ ಏರ್‌ಟೆಲ್ ತನ್ನ ಷೇರುಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಮೂಲಕ 4 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದ 12ನೇ ಭಾರತೀಯ ಸಂಸ್ಥೆಯಾಗಿದೆ.
ಮುಂಬೈ ಷೇರುಪೇಟೆ (ಬಿಎಸ್‌ಇ)ಯಲ್ಲಿ ಏರ್‌ಟೆಲ್ ಷೇರು ಶೇ.5 ರಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 734 ರೂಪಾಯಿಗಳಿಗೆ ತಲುಪಿದೆ. ಕಳೆದ ತಿಂಗಳು, ಏರ್‌ಟೆಲ್ ಸಂಸ್ಥೆಯು ಹಕ್ಕುಗಳ ವಿತರಣೆಯ ಮೂಲಕ 21,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಅನುಮೋದನೆ ನೀಡಿತ್ತು.
PublicNext
15/09/2021 09:50 pm