ಬೆಂಗಳೂರು: ಕೋವಿಡ್ ನಿಂದಾಗಿ ಬರೋಬ್ಬರಿ 18 ತಿಂಗಳ ಕಾಲ ವರ್ಕ್ ಫ್ರಂ ಹೋಂ ಗೆ ಅನುಮತಿ ನೀಡಿದ್ದ ವಿಪ್ರೋ ಕಂಪನಿ ಈದೀಗ ತನ್ನ ಉದ್ಯೋಗಿಗಳಿಗೆ ಆಫೀಸ್ ಗೆ ಬರಲು ಕರೆ ನೀಡಿದೆ. ಹೌದು ನಾಳೆಯಿಂದ ಸೆ. 13ರಿಂದ ವಿಪ್ರೋದ ಉದ್ಯೋಗಿಗಳು ಆಫೀಸ್ ನಿಂದ ಕೆಲಸ ನಿರ್ವಹಿಸಲಿದ್ದಾರೆ.
ಇನ್ನು ಕೊರೊನಾ ಎರಡೂ ಡೋಸ್ ಲಸಿಕೆ ಪಡೆದ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ನಿರ್ವಹಿಸುವಂತೆ ಕಂಪನಿ ತಿಳಿಸಿದೆ.
ಈ ಬಗ್ಗೆ ವಿಪ್ರೋ ಚೇರ್ಮನ್ ರಿಷದ್ ಪ್ರೇಮ್ ಜಿ ಮಾಹಿತಿ ನೀಡಿದ್ದು, 18 ತಿಂಗಳ ಬಳಿಕ ವಿಪ್ರೋದ ಉದ್ಯೋಗಿಗಳು ಆಫೀಸಿಗೆ ಬರುತ್ತಿದ್ದಾರೆ. ನಾಳೆಯಿಂದ ಆಫೀಸ್ ಆರಂಭವಾಗಲಿದ್ದು, ವಾರದಲ್ಲಿ ಎರಡು ದಿನ ಆಫೀಸಿನಿಂದ ಕೆಲಸ ಮಾಡಲಿದ್ದಾರೆ. ಉಳಿದ ಮೂರು ದಿನ ವರ್ಕ್ ಫ್ರಂ ಹೋಂ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಕೊವಿಡ್ ಲಸಿಕೆಯನ್ನೂ ಹಾಕಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ವಿಪ್ರೋ ಆಫೀಸ್ ಗಳಲ್ಲಿ ಕೊವಿಡ್ ನಿಯಮಾವಳಿಗಳನ್ನು ಯಾವ ರೀತಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ವಿಡಿಯೋವನ್ನು ರಿಷದ್ ಪ್ರೇಮ್ ಜಿ ಹಂಚಿಕೊಂಡಿದ್ದಾರೆ.
PublicNext
12/09/2021 06:03 pm