ಮುಂಬೈ: ಬಿಗ್ ಬಾಸ್ಕೆಟ್ ನಲ್ಲಿ ಸುಮಾರು 9300 ರಿಂದ 9500 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಟಾಟಾ ಗ್ರೂಪ್ ಶೇಕಡಾ 68 ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ.
ಸರಿ ಸುಮಾರು 13,500 ಕೋಟಿ (ಸುಮಾರು 1.85 ಬಿಲಿಯನ್ ಡಾಲರ್) ಮೌಲ್ಯದ ಬಿಗ್ ಬ್ಯಾಸ್ಕೆಟ್ ಇತ್ತೀಚೆಗೆ 1 ಬಿಲಿಯನ್ ಡಾಲರ್ ಮೌಲ್ಯ ದಾಟಿ ಯೂನಿಕಾರ್ನ್ ಎನಿಸಿಕೊಂಡಿತ್ತು.
ಹರಿ ಮೆನನ್ ಒಡೆತನದ ಸಂಸ್ಥೆಯ ಹೂಡಿಕೆದಾರರಾದ ಅಲಿಬಾಬಾ, ಅಬ್ರಾಜ್ ಗ್ರೂಪ್ ಹಾಗೂ ಐಎಫ್ ಸಿ ಹೊರ ನಡೆಯಬೇಕಾಗುತ್ತದೆ. ಟಾಟಾ ಸಮೂಹ ಒಡೆತನ ಬಂದ ಮೇಲೂ ಹರಿ ಮೆನನ್ ಸೇರಿದಂತೆ ಸಂಸ್ಥೆ ಸ್ಥಾಪಕರು ಬೋರ್ಡ್ ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಗ್ ಬ್ಯಾಸ್ಕೆಟ್ ವಾರ್ಷಿಕ ಪ್ರಗತಿ ಶೇ 57ರಷ್ಟಿದ್ದು, 2024ರ ವೇಳೆಗೆ 18 ಬಿಲಿಯನ್ ಡಾಲರ್ ಮೌಲ್ಯಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.
ಇ-ಕಿರಾಣಿ ಕ್ಷೇತ್ರದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್, ಉಡಾನ್ , ರಿಲಯನ್ಸ್ ಜೊತೆಗೆ ಟಾಟಾ ಕೂಡಾ ಸೇರ್ಪಡೆಯಾಗಲಿದೆ.
ಕೊವಿಡ್ 19 ಕಾಲದಲ್ಲಿ ಬಿಗ್ ಬ್ಯಾಸ್ಕೆಟ್ ಶೇ 84ರಷ್ಟು ಹೆಚ್ಚುವರಿ ಗ್ರಾಹಕರನ್ನು ಸೆಳೆದಿದ್ದು, 20 ಮಿಲಿಯನ್ ಆರ್ಡರ್ ಪ್ರತಿ ತಿಂಗಳಿನಂತೆ ಪಡೆದುಕೊಂಡು ಗಮನಸೆಳೆದಿದೆ.
PublicNext
17/02/2021 03:24 pm