ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ , ಹಳದಿ ಲೋಹದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಶುಕ್ರವಾರ ಬೆಳಗ್ಗಿನ ಸಮಯದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ ₹4,838 ರೂಪಾಯಿಗೆ ತಲುಪಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶುಕ್ರವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ, ₹44,350 ರೂ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹48,380 ರೂ. ತಲುಪಿದೆ.
ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಇಂದು ಒಂದು ಕೆಜಿಗೆ ₹68,000 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹72,200 ಇದೆ.
ಪ್ರಮುಖ ನಗರಗಳಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ ಇಂತಿದೆ:
• ಬೆಂಗಳೂರು: ₹44,350 (22 ಕ್ಯಾರಟ್) ₹48,380 (24 ಕ್ಯಾರಟ್)
• ಚೆನ್ನೈ: ₹44,830 (22 ಕ್ಯಾರಟ್) ₹48,900(24 ಕ್ಯಾರಟ್)
• ದಿಲ್ಲಿ: ₹46,500 (22 ಕ್ಯಾರಟ್), ₹50,730 (24 ಕ್ಯಾರಟ್)
• ಹೈದರಾಬಾದ್: ₹44,350 (22 ಕ್ಯಾರಟ್) ₹48,380 (24 ಕ್ಯಾರಟ್)
• ಕೋಲ್ಕತಾ: ₹47,050 (22 ಕ್ಯಾರಟ್), ₹49,750 (24 ಕ್ಯಾರಟ್)
• ಮಂಗಳೂರು: ₹44,350 (22 ಕ್ಯಾರಟ್) ₹48,380 (24 ಕ್ಯಾರಟ್)
• ಮುಂಬಯಿ: ₹46,600(22 ಕ್ಯಾರಟ್), ₹47,600 (24 ಕ್ಯಾರಟ್)
• ಮೈಸೂರು: ₹44,350 (22 ಕ್ಯಾರಟ್) ₹48,380 (24 ಕ್ಯಾರಟ್)
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಕೆಲವೆಡೆ ಮಾತ್ರ ಏರಿಕೆಯಾಗಿದೆ.
PublicNext
05/02/2021 08:02 am