ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆಜಾನ್ ಸಿಇಒ ಹುದ್ದೆ ತ್ಯಜಿಸಲಿರುವ ಜೆಫ್ ಬೆಜೋಸ್

ನ್ಯೂಯಾರ್ಕ್: ಖ್ಯಾತ ಆನ್‌ಲೈನ್ ಶಾಪಿಂಗ್, ಮರನಂಜನಾ ಕಂಪೆನಿಯನ್ನು ಸ್ಥಾಪಿಸಿದ್ದ ಜೆಫ್ ಬೆಜೋಸ್ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಜೆಫ್ ಬೆಜೋಸ್ ಮಂಗಳವಾರ ಹೇಳಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ರಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯದಲ್ಲಿ ಎರಡರಲ್ಲೂ ಏರಿಕೆ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ. ಹಾಗಾಗಿ ಸದ್ಯ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆ್ಯಂಡಿ ಜಾಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ.

Edited By : Vijay Kumar
PublicNext

PublicNext

03/02/2021 01:49 pm

Cinque Terre

30.52 K

Cinque Terre

0

ಸಂಬಂಧಿತ ಸುದ್ದಿ