ನವದೆಹಲಿ: 100, 10, 5 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳು ಬ್ಯಾನ್ ಆಗುತ್ತವೆ ಎಂಬ ವದಂತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.
ದೇಶದಲ್ಲಿ ಯಾವುದೇ ಕಾರಣಕ್ಕೂ ನೋಟ್ ಬ್ಯಾನ್ ಆಗುವುದಿಲ್ಲ. ನಾವು ಹಳೆಯ ಹರಿದ ಮತ್ತು ಕೊಳೆಯಾದ ನೋಟುಗಳು ಬ್ಯಾಂಕ್‌ಗಳಿಗೆ ಬಂದರೆ, ಅವುಗಳನ್ನು ಮತ್ತೆ ಗ್ರಾಹಕರಿಗೆ ನೀಡಬೇಡಿ ಅಂತ ಹೇಳಿದ್ದೇವೆ. ಆದರೆ ನಮ್ಮ ಈ ಹೇಳಿಕೆಯನ್ನು ಯಾರೋ ತಿರುಚಿ ಸುದ್ದಿ ಮಾಡಿದ್ದಾರೆ. ಇದನ್ನು ಜನ ನಂಬಿದ್ದಾರೆ. ಇದಕ್ಕೆ ಆರ್‌ಬಿಐ ಏನೂ ಮಾಡೋಕೆ ಆಗುತ್ತೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಮಾರ್ಚ್ ಅಥವಾ ಏಪ್ರಿಲ್ ಬಳಿಕವೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರುತ್ತವೆ. ಈ ಕುರಿತು ದೇಶದ ಜನ ಚಿಂತಿಸುವುದು ಬೇಡ ಎಂದು ಆರ್‌ಬಿಐ ತಿಳಿಸಿದೆ.
PublicNext
25/01/2021 07:30 am