ಪ್ರೀತಿಯ ಗಾಡಿಗೆ ತಮಗಿಷ್ಟವಾದ ನಂಬರ್ ಪ್ಲೇಟ್ ಖರೀದಿಸಲು ಹೆಚ್ಚು ಹಣ ವ್ಯಯಿಸುವವರಿದ್ದಾರೆ. ಲಕ್ಷ, ಕೋಟಿ ರೂಪಾಯಿ ಖರ್ಚು ಮಾಡಿ ತಮಗೆ ಬೇಕಾದ, ತಮ್ಮ ಅದೃಷ್ಠದ ನಂಬರ್ ಖರೀದಿಸುತ್ತಾರೆ.
ಹೀಗೆ 25 ಕೋಟಿ ರೂಪಾಯಿ ನೀಡಿ ವಿಶ್ವದ ಅತ್ಯಂತ ದುಬಾರಿ ಬುಗಾಟಿ ಚಿರೋನ್ ಕಾರು ಖರೀದಿಸಿ ಮಾಲೀಕ, ನಂಬರ್ ಪ್ಲೇಟ್ ಗಾಗಿ ಕಾರಿಗಿಂತ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆ.
ಹೌದು ಇಷ್ವಾದ ನಂಬರ,ಲಕ್ಕಿ ನಂಬರ್ ಪಡೆಯಲು ಕೆಲ ನಂಬರ್ ಬಿಡ್ಡಿಂಗ್ ಮೂಲಕ ಪಡೆದುಕೊಳ್ಳಬೇಕು.
ವಿಶೇಷವಾಗಿ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಬಹುತೇಕರ ಕಾರಿನ ನಂಬರ್ ಪ್ಲೇಟ್ ಸ್ಪೆಷಲ್ ಆಗಿರುತ್ತದೆ.
ದುಬೈ ಶ್ರೀಮಂತರು ಈ ರೀತಿ ಬೇಕಾದ ನಂಬರ್ ಪಡೆಯಲು ಎಷ್ಟು ಹಣ ಬೇಕಾದರು ಖರ್ಚು ಮಾಡುತ್ತಾರೆ.
ದುಬೈನ ಶ್ರೀಮಂತ ವ್ಯಕ್ತಿ ಕಾರಿನ ಬೆಲೆ 25 ಕೋಟಿ ರೂಪಾಯಿ.
ಕಾರೇ ದುಬಾರಿ, ಇನ್ನು ಈ ಕಾರಿಗೆ ತನಗಿಷ್ಠವಾದ ರಿಜಿಸ್ಟ್ರೇಶನ್ ನಂಬರ್ ಬುಕ್ ಮಾಡಲು ಮುಂದಾಗಿದ್ದಾನೆ. ಆದರೆ ಅದೇ ನಂಬರ್ ಗೆ ಹಲವು ಶ್ರೀಮಂತರು ಬೇಡಿಕೆ ಇಟ್ಟಿದ್ದರು.
ಬೇಡಿಕೆ ಹೆಚ್ಚಾದ ಕಾರಣ ದುಬೈ ಪೊಲೀಸರು ವಿಶೇಷ ನಂಬರ್ ಗಾಗಿ ಬಿಡ್ಡಿಂಗ್ ನಡೆಸಿದ್ದಾರೆ.
ಈ ಬಿಡ್ಡಿಂಗ್ನಲ್ಲಿ ಶ್ರೀಮಂತ ಬುಗಾಟಿ ಚಿರೋನ್ ಮಾಲೀಕ ಬರೋಬ್ಬರಿ 52 ಕೋಟಿ ರೂಪಾಯಿಗೆ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ.
ಈತನ ನಂಬರ್ ಕ್ರೇಝ್ ಗೆ ದುಬೈ ಪೊಲೀಸರು ದಂಗಾಗಿದ್ದಾರೆ.
ಕಾರಿನ ಬೆಲೆಗಿಂತ 2 ಪಟ್ಟು ಹೆಚ್ಚು ಹಣ ನೀಡಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ.
ಕಾರಿನ ನಂಬರ್ ಪ್ಲೇಟ್ ಮೇಲೆ ದುಬೈ ರಿಡಿಸ್ಟ್ರೇಶನ್ 9 ಎಂದು ಬರೆಯಲಾಗಿದೆ.
PublicNext
24/12/2020 04:51 pm