ವಾಷಿಂಗ್ಟನ್: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅವರೊಂದಿಗೆ ದೇಶದಲ್ಲಿ ಟೆಕ್ ಕಂಪನಿಯ ಚಟುವಟಿಕೆಗಳ ವಿವಿಧ ಅಂಶಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಡಿಜಿಟಲೀಕರಣದ ಪ್ರಯತ್ನಗಳ ಕುರಿತು ಚರ್ಚೆ ನಡೆಸಿದ್ದಾರೆ.
ಭಾರತೀಯ ರಾಯಭಾರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ಭಾರತ ಕೈಗೊಂಡಿರುವ ಹಲವು ಡಿಜಿಟಲೀಕರಣದ ಇನಿಷಿಯೇಟಿವ್ ಬಗ್ಗೆ ಬಹಳ ಶ್ಲಾಘಿಸಿದ್ದಾರೆ. ಹಾಗೇ, ಗೂಗಲ್ ಭಾರತವನ್ನು ಸಕಾರಾತ್ಮಕ ಚೌಕಟ್ಟಿನಲ್ಲಿ ನೋಡುತ್ತಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಗೂಗಲ್ನ ಪಾಲುದಾರಿಕೆಯನ್ನು ಮುಂದುವರಿಸುವ ವಿವಿಧ ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯ ಡಿಜಿಟಲೈಸೇಶನ್ ಸೇರಿದಂತೆ ಗೂಗಲ್ ತೊಡಗಿಸಿಕೊಂಡಿರುವ ಹಲವು ವಿಭಾಗಗಳಲ್ಲಿ ಭಾರತದ ಡಿಜಿಟಲೀಕರಣದ ಪ್ರಯತ್ನಗಳನ್ನು ಕೂಡ ಚರ್ಚಿಸಿದ್ದಾರೆ.
PublicNext
20/09/2022 02:14 pm