ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ 48 ವರ್ಷದ ಹಿಂದಿನ ತಮ್ಮ ರೆಸ್ಯೂಮ್ ಅನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಯುವ ಉದ್ಯೋಗಾಂಕ್ಷಿಗಳಿಗೆ ಸ್ಪೂರ್ತಿಯಾಗಲಿ ಅನ್ನೋ ಹಿನ್ನೆಲೆಯಲ್ಲಿಯೇ ಬಿಲ್ ಗೇಟ್ಸ್ ತಮ್ಮ ರೆಸ್ಯೂಮ್ ಅನ್ನ ಈಗ ಇಲ್ಲಿ ಹಂಚಿಕೊಂಡಿದ್ದಾರೆ.
ಈ ಮೂಲಕ ತಮ್ಮ ಹಳೆ ದಿನಗಳನ್ನೂ ತಮ್ಮ ಫಾಲೋವರ್ಸ್‌ಗೆ ತಿಳಿಸಿದ್ದು, ಈಗೀನ ಯುವ ಉದ್ಯೋಗಾಂಕ್ಷಿಗಳ ರೆಸ್ಯೂಮ್ ಅತ್ಯುತ್ತಮವಾಗಿಯೇ ಇರುತ್ತವೆ. ಅದಕ್ಕೆ ಹೋಲಿಸಿದರೆ ನನ್ನ ರೆಸ್ಯೂಮ್ ಏನೂ ಅಲ್ಲ ಅಂತಲೇ ಬರೆದುಕೊಂಡಿದ್ದಾರೆ. ಬಿಲ್ ಗೇಟ್ಸ್ ಹಂಚಿಕೊಂಡ ತಮ್ಮ ರೆಸ್ಯೂಮ್ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
02/07/2022 03:11 pm