ಬೆಂಗಳೂರು : ನವರಾತ್ರಿ ಹಬ್ಬಕ್ಕೆ ಸಂಭ್ರಮದಲ್ಲಿದ್ದ ಜನರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ.ಇಂದಿನಿಂದಲೇ ವಿದ್ಯುತ್ ದರ ಏರಿಕೆಯಾಗಿದೆ.ಕಲ್ಲಿದ್ದಲು ದರ ಹೆಚ್ಚಳ, ನಷ್ಟದ ನೆಪವೊಡ್ಡಿ ದರ ಏರಿಸಲು ಇಂಧನ ಇಲಾಖೆ ಮುಂದಾಗಿದೆ.ಬೆಸ್ಕಾಂ ಸೇರಿ 5 ಎಸ್ಕಾಂಗಳ ದರವನ್ನು ಏರಿಕೆ ಮಾಡಲಾಗಿದೆ.
ಪ್ರತಿ ಯೂನಿಟ್ ಗೆ ಎಲ್ಲಿ ಎಷ್ಟು ಹೆಚ್ಚಳ ಅಂತಾ ನೋಡುವುದಾದ್ರೆ
* ಬೆಸ್ಕಾಂ – 43 ಪೈಸೆ
* ಸೆಸ್ಕಾಂ – 35 ಪೈಸೆ
* ಹೆಸ್ಕಾಂ – 35 ಪೈಸೆ
* ಜೆಸ್ಕಾಂ – 35 ಪೈಸೆ
* ಮೆಸ್ಕಾಂ – 24 ಪೈಸೆ
ಬೆಸ್ಕಾಂ ವ್ಯಾಪ್ತಿ ಒಂದು ಮನೆಗೆ 500 ರೂ. ಬರುತ್ತಿದ್ದರೆ 40 ರೂ. ಹೆಚ್ಚಳವಾಗಲಿದೆ. 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ ಇಂದಿನಿಂದ 1,080ರೂ. ಆಗಲಿದೆ.
PublicNext
01/10/2022 01:49 pm