ನವದೆಹಲಿ: ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿವೆ. ಇಂದಿನಿಂದ ನೂತನ ದರ ಜಾರಿಗೆ ಬರಲಿದೆ.
ತೈಲ ಕಂಪನಿಗಳು ಪ್ರತಿ ತಿಂಗಳ 1ರಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಅದೇ ರೀತಿ ಇವತ್ತು ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸಹ ಪರಿಷ್ಕರಿಸಿವೆ. ಬೆಲೆ ಇಳಿಕೆಯಾಗಿದ್ದು, ಜನರ ಜೇಬಿನಲ್ಲಿರುವ ಹಣಕ್ಕೆ ಕೊಂಚ ರಿಲೀಫ್ ಸಿಕ್ಕಿದೆ.
ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಇಂಧನ ಗ್ಯಾಸ್ ಬೆಲೆ ಇದೀಗ 1,976 ರೂಪಾಯಿ ಬದಲಿಗೆ 1,885 ರೂ. ಆಗಿದೆ. ಇನ್ನು ಗೃಹ ಬಳಕೆ ಎಲ್‌ಪಿಜಿ ದರ 1,055 ರೂ. ಇದೆ. ದೇಶದ ಪ್ರಮುಖಗಳಲ್ಲಿ ನೋಡುವುದಾದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆಯವರೆಗೆ 1976.50 ಇತ್ತು. ಈಗ 1885 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 2095.50 ರಿಂದ 1995.50 ಕ್ಕೆ ಇಳಿದಿದೆ. ಮುಂಬೈನಲ್ಲಿ 1936.50 ರಿಂದ 1844 ಕ್ಕೆ ಕುಸಿದಿದೆ. ಚೆನ್ನೈನಲ್ಲಿ ರೂ.2141 ಬದಲಿಗೆ 2045 ರೂಪಾಯಿ ಆಗಿದೆ.
PublicNext
01/09/2022 09:42 am