ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಕ್ಕೆ 4 ದಿನ ಕೆಲಸ: ಜುಲೈ 1ರಿಂದ ಹೊಸ ಕಾರ್ಮಿಕ ನೀತಿ; ಏನೆಲ್ಲಾ ಬದಲಾಗಲಿದೆ?: ಇಲ್ಲಿದೆ ಮಾಹಿತಿ

ನವದೆಹಲಿ: ಜುಲೈ 1 ರಿಂದ ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರವು ಮುಂದಾಗಿದೆ. ಹೀಗಾಗಿ ಕೈಯಲ್ಲಿರುವ ಸಂಬಳ, ಉದ್ಯೋಗಿಗಳ ಪಿಎಫ್ ಕೊಡುಗೆ ಮತ್ತು ಕೆಲಸದ ಸಮಯವು ಗಮನಾರ್ಹವಾಗಿ ಬದಲಾಗಬಹುದು. ಹೊಸದಾಗಿ ಸೂಚಿಸಲಾದ ವೇತನ ಸಂಹಿತೆಯಲ್ಲಿ ಮಾರ್ಪಾಡುಗಳಿದ್ದು ಕಾರ್ಮಿಕರ ಕೆಲಸದ ಸಮಯ, ಪಿಎಫ್ ಕೊಡುಗೆಗಳು ಮತ್ತು ಉದ್ಯೋಗಿಗಳ ಸಂಬಳದಲ್ಲಿ ವ್ಯತ್ಯಾಸವಾಗಲಿದೆ.

ಹೊಸ ಕಾರ್ಮಿಕ ನೀತಿಯ ಪ್ರಕಾರ, ಕಂಪನಿಗಳು ತಮ್ಮ ಉದ್ಯೋಗಿಗಳ ದೈನಂದಿನ ಸೇವಾವಧಿಯನ್ನು ಈಗಿರುವ 8-9 ಗಂಟೆಯಿಂದ 12 ಗಂಟೆಯವರೆಗೆ ವಿಸ್ತರಿಸಬಹುದಾಗಿದೆ. ಜೊತೆಗೆ ವಾರಕ್ಕೆ ಮೂರು ದಿನ ವೀಕ್‌-ಆಫ್ ಕೊಡಬಹುದಾಗಿದೆ. ಅಂದರೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸವಿರಲಿದೆ. ಈ ಸೌಲಭ್ಯವು ವಾರಕ್ಕೆ 48 ಗಂಟೆಗಳ ಕಾಲ ದುಡಿಮೆ ಆಗಲೇಬೇಕೆಂಬ ನಿಯಮ ಉಲ್ಲಂಘನೆಯಾಗದಂತೆ ಕಂಪನಿಗಳು ನೋಡಿಕೊಳ್ಳಬೇಕಿರುತ್ತದೆ.

ಹೊಸ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಉದ್ಯೋಗಿಯ ಮೂಲ ವೇತನ, ಒಟ್ಟಾರೆ ವೇತನದ ಶೇ. 50ರಷ್ಟು ಮಾತ್ರವೇ ಇರಲಿದೆ. ಭವಿಷ್ಯ ನಿಧಿಗಾಗಿ ಮಾಸಿಕ ವೇತನದಲ್ಲಿ ಆಗುವ ಕಡಿತ ಹೆಚ್ಚಾಗಲಿದೆ. ಇದರಿಂದ, ನಿವೃತ್ತಿಯ ನಂತರ ಸಿಗುವ ಭವಿಷ್ಯ ನಿಧಿ ಹಾಗೂ ಗ್ರಾಚ್ಯುಟಿ ಹಣದಲ್ಲಿ ಹೆಚ್ಚಳವಾಗಲಿದೆ.

Edited By : Vijay Kumar
PublicNext

PublicNext

25/06/2022 01:43 pm

Cinque Terre

26.18 K

Cinque Terre

4

ಸಂಬಂಧಿತ ಸುದ್ದಿ