ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಗ್ನಿಪಥ್ ಶಿಸ್ತುಬದ್ಧ, ತರಬೇತಿ ಪಡೆದ ಯುವಕರನ್ನು ಉದ್ಯಮಕ್ಕೆ ನೀಡುವುದು: ಟಾಟಾ ಸನ್ಸ್‌ ಅಧ್ಯಕ್ಷ

ನವದೆಹಲಿ: ಅಗ್ನಿಪಥ ಯೋಜನೆಗೆ ಉದ್ಯಮ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ಸದ್ಯ ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್ ಅವರು ಅಗ್ನಿಪಥ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ನಾಲ್ಕು ವರ್ಷದ ಕರ್ತವ್ಯ ಪೂರೈಸಿ ಬರುವ 'ಅಗ್ನಿವೀರ'ರಿಗೆ ಉದ್ಯಮ ವಲಯದಲ್ಲಿ ಉದ್ಯೋಗದ ಅವಕಾಶ ವ್ಯಾಪಕವಾಗಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ ಯೋಜನೆಯು ಯುವಜನರಿಗೆ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿಸುತ್ತದೆ. ಜೊತೆಗೆ ಶಿಸ್ತಿನ ಹಾಗೂ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಉದ್ಯಮ ವಲಯಕ್ಕೆ ಒದಗಿಸಲಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.

Edited By : Vijay Kumar
PublicNext

PublicNext

21/06/2022 04:51 pm

Cinque Terre

22.32 K

Cinque Terre

0

ಸಂಬಂಧಿತ ಸುದ್ದಿ