ನವದೆಹಲಿ: ಯಾವುದೇ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯದಿಂದ ಒಂದು ಹಣಕಾಸು ವರ್ಷದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ರೂಪದಲ್ಲಿ 25,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣ ಕಡಿತವಾದರೆ, ಅಂಥವರು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.
ಅದೇ ರೀತಿ ಹಿರಿಯ ನಾಗರಿಕರ ವಾರ್ಷಿಕ ಆದಾಯದಲ್ಲಿ 50,000 ರೂಪಾಯಿಗಿಂತ ಹೆಚ್ಚು ಟಿಡಿಎಸ್/ಟಿಸಿಎಸ್ ಕಡಿತವಾದರೆ ಅವರು ಕೂಡ ಐಟಿಆರ್ ಸಲ್ಲಿಸುವುದು ಅವಶ್ಯ.
ವ್ಯಕ್ತಿಯ ಆದಾಯ ತೆರಿಗೆ ಮಿತಿಯಲ್ಲಿ ಬಾರದೇ ಇದ್ದರೂ ಕೂಡ ಐಟಿಆರ್ ಸಲ್ಲಿಕೆ ಅವಶ್ಯ ಮಾಡಬೇಕು. ಇದೇ ರೀತಿ, ವ್ಯಕ್ತಿಯೊಬ್ಬ ತನ್ನ ಉಳಿತಾಯ ಬ್ಯಾಂಕ್ ಖಾತೆಯಲ್ಲಿ 50 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಿದರೆ ಆಗಲೂ ಅಂಥವರು ಕಡ್ಡಾಯವಾಗಿ ಐಟಿಆರ್ ಸಲ್ಲಿಸಬೇಕು.
PublicNext
23/04/2022 07:35 am