ಬೆಂಗಳೂರು: ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಗ್ಯಾಸ್, ದಿನಸಿ ಸಾಮಗ್ರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ನಡುವೆ ಹಾಲಿನ ಬೆಲೆಯೂ ಹೆಚ್ಚಳವಾಗಲಿದೆ ಎಂಬ ಮಾಹಿತಿ ಬಹುತೇಕ ಖಚಿತವಾಗಿದೆ.
ಶೀಘ್ರದಲ್ಲೇ ನಂದಿನ ಹಾಲಿನ ದರ ಹೆಚ್ಚಳ ಮಾಡಲು ಹಾಲುಗಳ ಒಕ್ಕೂಟ ಮುಂದಾಗಿದೆ ಎನ್ನಲಾಗಿದೆ. ಬೆಲೆ ಏರಿಕೆಯ ಅನಿವಾರ್ಯತೆಯ ಹಿನ್ನಲೆಯಲ್ಲಿ ಪ್ರತಿ ಲೀಟರ್‌ಗೆ 5 ರೂಗಳನ್ನು ಹೆಚ್ಚಳ ಮಾಡಲು ತೀರ್ಮಾನಿಸಿದ್ದಾವೆ ಎನ್ನಲಾಗಿದೆ. ಈಗಾಗಲೇ ಬೆಲೆ ಏರಿಕೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿಯವರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಲು ರಾಜ್ಯದ ಎಲ್ಲಾ ಹಾಲುಗಳ ನಿಗಮಗಳ ಒಕ್ಕೂಟದ ಮುಖ್ಯಸ್ಥರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಬಳಿ ನಿಯೋಗ ಇದೇ ಏಪ್ರಿಲ್ 10ರಂದು ಹೋಗಲಿದೆ ಎನ್ನಲಾಗಿದೆ.
PublicNext
06/04/2022 10:11 am