ಬೆಂಗಳೂರು: ಸುದೀರ್ಘ ಅವಧಿಯ ಬಳಿಕ ಸತತ ಐದನೇ ಬಾರಿಗೆ ಲೀಟರ್ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ. ಆ ಮೂಲಕ ತೈಲ ಮಾರಾಟ ಕಂಪನಿಗಳು ಕಚ್ಚಾ ತೈಲ ದರ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಆರಂಭಿಸಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಸುಮಾರು ಶೇ 40ರಷ್ಟು ಏರಿಕೆಯಾದ ಪರಿಣಾಮ ಈ ಬೆಲೆ ಹೆಚ್ಚಳ ಉಂಟಾಗಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಪಂಪ್‌ಗಳಲ್ಲಿನ ರೀಟೇಲ್ ದರದಲ್ಲಿ ಕೂಡ ಬೆಲೆಯಲ್ಲಿ 80 ಪೈಸೆಯಂತೆ ಏರಿಕೆ ಮಾಡಲಾಗಿತ್ತು. ಇದೀಗ ಒಂದೇ ವಾರದಲ್ಲಿ ಐದನೇ ಬಾರಿಗೆ ತೈಲ ಬೆಲೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ನಲ್ಲಿ 50 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆಯಲ್ಲಿ ತಲಾ 55 ಪೈಸೆ ಹೆಚ್ಚಳ ಮಾಡಲಾಗಿದೆ.
ರಾಜ್ಯ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ತೈಲ ದರ ಎಷ್ಟಿದೆ...?
ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಪೆಟ್ರೋಲ್: ₹99.11, ಡೀಸೆಲ್: ₹90.42
ಅರಮನೆ ನಗರಿ ಮೈಸೂರು ಪೆಟ್ರೋಲ್: ₹104.26, ಡೀಸೆಲ್: ₹88.49
ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: ₹104.46, ಡೀಸೆಲ್: ₹88.67
ಕಡಲನಗರಿ ಮಂಗಳೂರು ಪೆಟ್ರೋಲ್: ₹103.74, ಡೀಸೆಲ್: ₹87.99
ಪಶ್ಚಿಮ ಬಂಗಾಳದ ಕೋಲ್ಕತಾ ಪೆಟ್ರೋಲ್ : ₹108.53, ಡೀಸೆಲ್ : ₹93.57
ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್ : ₹113.88, ಡೀಸೆಲ್ : ₹98.13
ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್ : ₹105.00, ಡೀಸೆಲ್ : ₹95.10
PublicNext
27/03/2022 03:30 pm