ಬೆಂಗಳೂರು: ಹಾಲಿನ ದರ ಏರಿಸಲ್ಲ ಅಂತಿದ್ದ ಕೆಎಂಎಫ್, ಇದೀಗ ದರ ಏರಿಸಲು ಸಜ್ಜಾಗಿದೆ.. ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕೆಎಂಎಫ್ ಸಿದ್ಧತೆ ನಡೆಸಿದೆ. ಹಾಲಿನ ದರ ಪರಿಷ್ಕರಣೆಗೆ ಮುಂದಾಗಿರುವ ಕೆಎಂಎಫ್, ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಿದೆ. ರಾಜ್ಯದ 14 ಹಾಲು ಒಕ್ಕೂಟಗಳು ಕೆಎಂಎಫ್ ಮುಂದೆ ಪ್ರತಿ ಲೀಟರ್ ಗೆ 5ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಇಟ್ಟಿದ್ದವು. ಹೀಗಾಗಿ ದರದ ಸಾಧಕ ಬಾಧಕಗಳನ್ನ ಪರಿಶೀಲನೆ ಮಾಡಿ ಏರಿಕೆ ಮಾಡಲು ಕೆಎಂಎಫ್ ಮುಂದಾಗಿದೆ. ಮುಂದಿನ ತಿಂಗಳಿಂದಲೇ ದರ ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಬಿಗಿಪಟ್ಟು ಹಿಡಿದಿವೆ.
ಕಳೆದ 2 ವರ್ಷದಿಂದ ನಂದಿನ ಹಾಲಿನ ದರ ಏರಿಕೆ ಆಗಿಲ್ಲ.. ಸಾಕಷ್ಟು ನಷ್ಟ ಉಂಟಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಎಂಬ ಒತ್ತಡದ ಹಿನ್ನೆಲೆಯಲ್ಲಿ ಇದೇ ತಿಂಗಳ 28 ರಂದು ಸಭೆ ನಡೆಸಲು ಎಲ್ಲ ಹಾಲು ಒಕ್ಕೂಟಗಳು ನಿರ್ಧರಿಸಿವೆ..
ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ, ಸಾಗಾಣಿಕಾ ವೆಚ್ಚ ಹೆಚ್ಚಿದ ಹಿನ್ನೆಲೆಯಲ್ಲಿ ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿವೆ.. ಕಳೆದ ಜನವರಿಯಲ್ಲಿ 3 ರೂ. ಕೆಎಂಎಫ್ ದರ ಪರಿಷ್ಕರಣೆ ಮಾಡಿತ್ತು.. ಆದರೆ ಈ ಬಾರಿ ಗ್ರಾಹಕರಿಗೆ ಹೊರೆಯಾಗದಂತೆ ದರ ಪರಿಷ್ಕರಣೆಗೆ ಕೆಎಂಎಫ್ ಮುಂದಾಗಿದೆ.. ರಾಜ್ಯ ಸರ್ಕಾರದಿಂದ ಅಂಕಿತ ಸಿಕ್ಕಿದ ಕೂಡಲೇ ದರ ಪರಿಷ್ಕರಣೆ ಪ್ರಕಟಿಸಲು ಕೆಎಂಎಫ್ ಮುಂದಾಗಿದೆ.
PublicNext
21/03/2022 03:37 pm