ನವದೆಹಲಿ : ನಿತ್ಯ ಬ್ಯಾಂಕ್ ವ್ಯವಹಾರ ಮಾಡುವವರು ಈ ಸುದ್ದಿಯತ್ತ ಗಮನ ಹರಿಸಬೇಕು. ಡಿಸೆಂಬರ್ ತಿಂಗಳಿನಲ್ಲಿ ಪ್ರದೇಶವಾರು ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ ಒಟ್ಟು 12 ದಿನಗಳ ರಜೆ ಇರಲಿದೆ ಎಂದು ಆರ್‌ಬಿಐ (RBI) ತಿಳಿಸಿದೆ. ಹಾಗೂ ಈ ರಜಾದಿನಗಳ ಪಟ್ಟಿ ಈ ಕೆಳಗಿನಂತಿದೆ.
ಡಿಸೆಂಬರ್ 3- ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ಸಮಯದಲ್ಲಿ ಪಣಜಿಯಲ್ಲಿ ಬ್ಯಾಂಕ್ ರಜಾದಿನ
ಡಿಸೆಂಬರ್ 5 – ಭಾನುವಾರ (ರಜಾದಿನ)
ಡಿಸೆಂಬರ್ 11- ಶನಿವಾರ (ತಿಂಗಳ ಎರಡನೇ ಶನಿವಾರ)
ಡಿಸೆಂಬರ್ 12- ಭಾನುವಾರ (ರಜಾದಿನ)
ಡಿಸೆಂಬರ್ 18- ಥಾಮ್ ಪುಣ್ಯತಿಥಿ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 19- ಭಾನುವಾರ (ರಜಾದಿನ)
ಡಿಸೆಂಬರ್ 24- ಕ್ರಿಸ್ ಮಸ್ ಈವ್ (ಐಜ್ವಾಲ್ ನಲ್ಲಿ ಬ್ಯಾಂಕ್ ಹಾಲಿಡೇ)
ಡಿಸೆಂಬರ್ 25- ಕ್ರಿಸ್ ಮಸ್ ಈವ್, ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ಡಿಸೆಂಬರ್ 26- ಭಾನುವಾರ (ರಜಾದಿನ)
ಡಿಸೆಂಬರ್ 27- ಕ್ರಿಸ್ ಮಸ್ ಆಚರಣೆ (ಐಜ್ವಾಲ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 30- ಯು ಕಿಯಾಂಗ್ ನೊಂಗ್ಬಾ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 31- ಹೊಸ ವರ್ಷದ ಮುನ್ನಾದಿನ (ಐಜ್ವಾಲ್ ನಲ್ಲಿ ಬ್ಯಾಂಕ್ ಹಾಲಿಡೇ )
PublicNext
30/11/2021 03:47 pm