ನವದೆಹಲಿ: ತೈಲ ಬೆಲೆ ಏರಿಕೆ ನಿಲ್ಲುವಂತೆ ಕಾಣುತ್ತಿಲ್ಲ. ಸತತ ನಾಲ್ಕನೇ ದಿನವೂ ಇಂಧನ ದರ ಏರಿಕೆಯಾಗಿದೆ. ಶನಿವಾರ ಲೀಟರ್ ಮೇಲೆ 35 ಪೈಸೆಗಳಷ್ಟು ಹೆಚ್ಚಳವಾಗಿದ್ದು, ಭಾರತದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಬೆಲೆ ಏರಿಕೆ ಪರಿಣಾಮ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 112.79 ರೂ. ಆಗಿದ್ದರೆ, ಡೀಸೆಲ್ 103.72 ರೂ.ಗೆ ಏರಿದೆ. ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108.99 ರೂ. ಮತ್ತು ಲೀಟರ್ ಡೀಸೆಲ್ ಬೆಲೆ 97.72 ರೂ. ಆಗಿದೆ.
ಮುಂಬೈನಲ್ಲಿ ಪ್ರಸ್ತುತ ಪೆಟ್ರೋಲ್ ದರ 114.81 ರೂ. ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 105.86 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 109.46 ರೂ. ಮತ್ತು 100.84 ರೂ. ಮತ್ತು ಚೆನ್ನೈನಲ್ಲಿ ಕ್ರಮವಾಗಿ 105.74 ರೂ. ಮತ್ತು 101.92 ರೂ. ಇದೆ.
PublicNext
30/10/2021 09:38 am