ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಧನ ದರ ದಾಖಲೆ ಮಟ್ಟದಲ್ಲಿ ಏರಿಕೆ: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಇಂದು (ಗುರುವಾರ) ಕೂಡ ಮತ್ತೆ ಏರಿಕೆ ಕಂಡಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್​​ ಹಾಗೂ ಡೀಸೆಲ್​ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಲೀಟರ್ ಪೆಟ್ರೋಲ್ ದರ 106.54 ರೂಪಾಯಿ ಹಾಗೂ ಡೀಸೆಲ್​ ದರ 95.27 ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 112.44ಕ್ಕೆ ಹಾಗೂ ಲೀಟರ್ ಡೀಸೆಲ್ 103.26 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 107.12 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 98.38 ರೂ. ಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.05ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 101.12 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 103.61 ರೂ. ಇದ್ದು, ಲೀಟರ್ ಡೀಸೆಲ್ 99.59ಕ್ಕೆ ಲಭ್ಯವಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಕಚ್ಚಾ ತೈಲ ದರವು ಸಹ ಬ್ಯಾರೆಲ್‌ಗೆ 0.21 % ಏರಿಕೆಯಾಗಿದ್ದು, ಸದ್ಯಕ್ಕೆ 86.04 ಡಾಲರ್‌ಗೆ ತಲುಪಿದೆ.

Edited By : Vijay Kumar
PublicNext

PublicNext

21/10/2021 09:56 am

Cinque Terre

65.21 K

Cinque Terre

15

ಸಂಬಂಧಿತ ಸುದ್ದಿ