ನವದೆಹಲಿ: ದೇಶದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ತೈಲ ಬೆಲೆ ಏರಿಕೆ ಕಾಣುತ್ತಿದ್ದು, ಇಂದೂ ಸಹ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶುಕ್ರವಾರ ಲೀಟರಿಗ್ 35 ಪೈಸೆ ಹೆಚ್ಚಳ ಮಾಡಿವೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ 111.09 ರೂ. ಆಗಿದೆ. ಡೀಸೆಲ್ ಬೆಲೆಯು ಲೀಟರಿಗೆ 101.78 ರೂ. ಆಗಿದೆ. ಸೆಪ್ಟೆಂಬರ್ ಕೊನೆಯ ವಾರದ ನಂತರದ ಪೆಟ್ರೋಲ್ ಬೆಲೆಯನ್ನು 14 ಬಾರಿ, ಡೀಸೆಲ್ ಬೆಲೆಯನ್ನು 17 ಬಾರಿ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು 108.80 ರೂ. ಹಾಗೂ ಡೀಸೆಲ್ ಬೆಲೆಯು 99.63 ರೂ. ಆಗಿದೆ.
PublicNext
15/10/2021 05:03 pm