ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ವಿದ್ಯುತ್‌.!- ಪರಿಣಾಮವೇನು ಗೊತ್ತಾ?

ನವದೆಹಲಿ: ದೇಶಾದ್ಯಂತ ಡೀಸೆಲ್, ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರು ದರ ಹೆಚ್ಚಳದಿಂದ ಬವಣೆ ಪಡುತ್ತಿದ್ದಾರೆ. ಈ ಮಧ್ಯೆ ದ್ವಿಚಕ್ರ ವಾಹನಗಳು ಬಳಸುವ ಇಂಧನ ಮತ್ತು ವಿದ್ಯುತ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ನೀತಿ ಆಯೋಗ ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ.

ಜಿಎಸ್‌ಟಿ ವ್ಯಾಪ್ತಿಗೆ ದ್ವಿಚಕ್ರವಾಹನಗಳು ಬಳಸುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸೇರ್ಪಡೆಗೊಳಿಸುವುದರಿಂದ ಅದರ ದರ ಇಳಿಕೆಯಾಗಲಿದೆ. ಈ ಪ್ರಸ್ತಾಪದಿಂದ ಕೇಂದ್ರ- ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ತಲೆದೋರದು. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಜಿಎಸ್‌ಟಿ ಜಾರಿಗೊಳಿಸಿದ ನಂತರ ಶೇ.50ರಷ್ಟು ಪಾಲನ್ನು ರಾಜ್ಯ ಸರಕಾರಗಳಿಗೆ ನೀಡಬಹುದು. ಇದರಿಂದ ಇಂಧನಗಳಲ್ಲಿ ಕೇಂದ್ರ ಸಂಗ್ರಹಿಸುವ ಶೇ.50 ತೆರಿಗೆಯಲ್ಲೂ ಸಂಪನ್ಮೂಲ ವಿಕೇಂದ್ರೀಕರಣದ ಭಾಗವಾಗಿ ರಾಜ್ಯಗಳಿಗೆ ಪಾಲು ಸಿಗಲಿದೆ ಎಂದು ನೀತಿ ಆಯೋಗ ವಿಶ್ವಾಸ ವ್ಯಕ್ತಪಡಿಸಿದೆ.

ಪರಿಣಾಮವೇನು ಗೊತ್ತಾ?

* ಇಂಧನಗಳನ್ನು ಜಿಎಸ್‌ಟಿಗೆ ಸೇರಿಸಲು ರಾಜ್ಯಗಳು ವಿರೋಧಿಸುವ ನಿರೀಕ್ಷೆ ಇದೆ. ತಮ್ಮ ಹಣಕಾಸು ಸ್ವಾಯತ್ತತೆ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸುವ ಸಾಧ್ಯತೆ ಇದೆ.

* ದ್ವಿಚಕ್ರ ವಾಹನಗಳು ಬಳಸುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಅದರ ದರ ಗಣನೀಯ ಇಳಿಕೆಯಾಗಲಿದೆ. ಏಕೆಂದರೆ ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಶೇ.63ರಷ್ಟು ತೆರಿಗೆಯೇ ಇದೆ. ಜಿಎಸ್‌ಟಿಯಲ್ಲಿ ಗರಿಷ್ಠ ತೆರಿಗೆ ಶೇ.28 ಆಗಿದೆ.

* ತೈಲ ಮಾರಾಟದಲ್ಲಿ ಸಿಗುವ ದೊಡ್ಡ ಪ್ರಮಾಣದ ತೆರಿಗೆ ಆದಾಯವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರಕಾರವೂ ನೀತಿ ಆಯೋಗದ ಈ ಪ್ರಸ್ತಾಪವನ್ನು ಒಪ್ಪುವುದೇ ಎಂಬುದು ಸಂದೇಹಾಸ್ಪದ.

* ವಿದ್ಯುತ್‌ ಅನ್ನು ಜಿಎಸ್‌ಟಿಗೆ ಒಳಪಡಿಸುವುದಕ್ಕೆ ವಿರೋಧಿಸುವ ರಾಜ್ಯಗಳನ್ನು ಒಪ್ಪಿಸಲು 6 ವರ್ಷಗಳ ತನಕ ನಷ್ಟ ಪರಿಹಾರದ ಸೂತ್ರವನ್ನು ಕೇಂದ್ರ ಮುಂದಿಡಬಹುದು.

Edited By : Vijay Kumar
PublicNext

PublicNext

24/08/2021 09:27 am

Cinque Terre

64.72 K

Cinque Terre

15