ನವದೆಹಲಿ : ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ ಮತ್ತು ಡೀಸೆಲ್ ಕೂಡ ಹಲವು ನಗರಗಳಲ್ಲಿ 100 ಕ್ಕಿಂತ ಹೆಚ್ಚಿನ ಬೆಳೆಗೆ ಮಾರಾಟವಾಗುತ್ತಿದೆ. ಆದರೆ, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬಳಕೆದಾರರಿಗೆ ಒಳ್ಳೆಯ ದಿನ, ಏಕೆಂದರೆ ಭಾನುವಾರ ತೈಲ ಬೆಲೆ ಇಳಿಕೆಯಾಗಿದೆ. ತೈಲ ಕಂಪನಿಗಳು ಬೆಳಿಗ್ಗೆ ಹೊಸ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ನೀವು ಇಂದಿನ ಬೆಲೆಯನ್ನು ನೋಡಿದರೆ, ಇಂಡಿಯನ್ ಆಯಿಲ್ ವೆಬ್‌ಸೈಟ್ ಪ್ರಕಾರ, ಇಂಧನ ಬೆಲೆ ಕಡಿಮೆಯಾಗಿವೆ.
ಹೊಸ ದರದ ಪ್ರಕಾರ, ಡೀಸೆಲ್ ಬೆಲೆ 10-20 ಪೈಸೆ ಮತ್ತು ಪೆಟ್ರೋಲ್‌ನಲ್ಲಿ ಸುಮಾರು 10 ಪೈಸೆ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಡೀಸೆಲ್ ಬೆಲೆಯಲ್ಲಿ ಇಳಿಯುತ್ತಲೆ ಇದೆ. ಪೆಟ್ರೋಲ್ ಬೆಲೆಯು ದೀರ್ಘಕಾಲದವರೆಗೆ ಸ್ಥಿರವಾಗಿತ್ತು ಮತ್ತು ಪೆಟ್ರೋಲ್ ಬೆಲೆಯಲ್ಲಿ ಕೊನೆಯ ಬದಲಾವಣೆ ಜುಲೈ 18 ರಂದು ಆಗಿತ್ತು. ಈಗ ಸುಮಾರು ಒಂದು ತಿಂಗಳ ನಂತರ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ ಮತ್ತು ಬೆಲೆಯಲ್ಲಿ ಇಳಿಕೆಯಾಗಿದೆ.
PublicNext
22/08/2021 10:44 am