ಮುಂಬಯಿ: ಒಮಿಕ್ರಾನ್ ವೈರಸ್‌ನ ತೀವ್ರತೆ ಹಾಗೂ ಹರಡುವಿಕೆ ಭೀತಿಯಿಂದ ಆರ್ಥಿಕ ಹೊಡೆತ ಬೀಳಬಹುದೆಂಬ ಆತಂಕ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಷೇರು ಪೇಟೆಯಲ್ಲಿ ಸೋಮವಾರ (ಡಿಸೆಂಬರ್ 20) ಸೆನ್ಸೆಕ್ಸ್ ಪಾತಾಳಕ್ಕೆ ಕುಸಿದಿದೆ. ಇದರ ಪರಿಣಾಮ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಎನ್ಎಸ್ಇ ನಿಫ್ಟಿ 402.70 ಅಂಕಗಳಷ್ಟು ಕುಸಿತಗೊಂಡಿದ್ದು, 16,582.50 ಅಂಕಗಳ ಮಟ್ಟ ತಲುಪಿದೆ. ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,100 ಅಂಕಗಳಷ್ಟು ಕುಸಿತಗೊಂಡಿದ್ದರೆ, ಎನ್ ಎಸ್ ಇ ನಿಫ್ಟಿ 300 ಅಂಕಗಳಷ್ಟು ಇಳಿಕೆಯಾಗಿತ್ತು.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,329.70 ಅಂಕ ಕುಸಿತದೊಂದಿಗೆ 55,682.04 ಅಂಕಗಳಲ್ಲಿ ವಹಿವಾಟು ನಡೆಸಿದೆ.
PublicNext
20/12/2021 04:05 pm