ಬೆಂಗಳೂರು : ಪ್ರಸ್ತುತ ಹತ್ತಾರು ಶುಭ ಕಾರ್ಯಕ್ರಮಗಳು ನಡೆಯುವ ಸಂದರ್ಭ ಈ ವೇಳೆ ಬೆಳ್ಳಿ,ಬಂಗಾರದ ದರ ಗಗನ ಮುಖಿಯಾಗಿದ್ದು ಕೊಳ್ಳುವವರ ಪಾಡು ದೇವರಿಗೆ ಪ್ರೀಯ ಎನ್ನುವಂತಾಗಿದೆ.
ಕಳೆದೊಂದು ವಾರದಿಂದ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ.
ಕಳೆದ ವಾರ ಭಾರತದಲ್ಲಿ 10 ಗ್ರಾಂಗೆ 49,150 ರೂ. ಇದ್ದ ಚಿನ್ನದ ಬೆಲೆ ಇಂದು 50,370 ರೂ. ಆಗಿದೆ.
ದೇಶದ ನಾನಾ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 52 ಸಾವಿರ ರೂ. ದಾಟಿದೆ.
ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ ಇಂದು 51,380 ರೂ. ಆಗಿದೆ.
22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 47,100 ರೂ. ಇದೆ.
ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,370 ರೂ. ಆಗಿದೆ.
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 50,370 ರೂ. ಆಗಿದೆ. ಇದು ಆಯಾ ನಗರಗಳಲ್ಲಿ ವ್ಯತ್ಯಾಸವಾಗಲಿದೆ.
ಬೆಂಗಳೂರಿನಲ್ಲಿ 4 ದಿನಗಳ ಹಿಂದೆ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 50,060 ರೂ. ಇದ್ದ ಬೆಲೆ ಇಂದು 51,380ಕ್ಕೆ ಏರಿಕೆಯಾಗಿದೆ. ಹಾಗೇ, 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು 47,100 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.
ಭಾರತದಲ್ಲಿ 1 ಕೆಜಿ ಬೆಳ್ಳಿಗೆ ಕಳೆದ ವಾರ 63,600 ರೂ. ಇದ್ದುದು ಇಂದು 70,700 ರೂ. ಆಗಿದೆ.
ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಬೆಳ್ಳಿ ಬೆಲೆ ಕೊಂಚ ಕಡಿಮೆಯಾಗಿದ್ದು, ಇಂದು 1 ಕೆಜಿ ಬೆಳ್ಳಿಗೆ 67,600 ರೂ. ಆಗಿದೆ.
ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ಭುವನೇಶ್ವರ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ ಭಾರೀ ಹೆಚ್ಚಳವಾಗಿದ್ದು, 1 ಕೆಜಿಗೆ 73,700 ರೂ. ದಾಟಿದೆ.
PublicNext
22/12/2020 10:42 am