ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಆರನೇ ದಿನ ಏರಿಕೆಯಾಗಿದ್ದು ಸವಾರರಿಗೆ ಹೊರೆಯಾಗುತ್ತಿದೆ.
ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 26 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 83.41 ರೂ.ಗಳಿಂದ 83.71 ರೂ.ಗೆ ಏರಿದರೆ. ಡೀಸೆಲ್ ಬೆಲೆ 73.61 ರೂ.ನಿಂದ 73.87 ರೂ.ಗೆ ಏರಿದೆ.
ಸುಮಾರು ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ.
ಇನ್ನು ನವೆಂಬರ್ 20ರಿಂದ 15 ಬಾರಿ ಬೆಲೆ ಏರಿಕೆಯಾಗಿದ್ದರೆ ಸತತ ಆರನೇ ದಿನ ದರ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 31 ಪೈಸೆ ಏರಿಕೆಯಾಗಿದ್ದು ಈ ಮೂಲಕ ಪೆಟ್ರೋಲ್ ಬೆಲೆ 86.51 ರೂಪಾಯಿಗೆ ತಲುಪಿದೆ.
ಇನ್ನು ಡೀಸೆಲ್ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದ್ದು ಇಂದಿನ ದರ 78.31 ರೂಪಾಯಿಗೆ ತಲುಪಿದೆ.
PublicNext
07/12/2020 02:52 pm