ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನವೆಂಬರ್ 20ರಿಂದ 28ರವರೆಗಿನ ದೇಶಾದ್ಯಂತ ಕಳೆದ 9 ದಿನಗಳ ಅವಧಿಯಲ್ಲಿ 8 ದಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿವೆ.
ಬೆಂಗಳೂರಿನಲ್ಲಿ ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ 24 ಪೈಸೆ ಹೆಚ್ಚಾಗಿದ್ದು, 84.87 ರೂ.ರಂತೆ ಮಾರಾಟವಾಗಿದೆ. ಡೀಸೆಲ್ ದರ 28 ಪೈಸೆ ಹೆಚ್ಚಾಗಿ 76.46 ರೂ.ರಂತೆ ಮಾರಾಟವಾಗಿದೆ. ಈ ಮೂಲಕ ಕಳೆದ 9 ದಿನಗಳಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 1.11 ರೂ.ರಷ್ಟು ಹಾಗೂ ಪ್ರತಿ ಲೀಟರ್ ಡೀಸೆಲ್ ದರ 1.77 ರೂ.ರಷ್ಟು ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 24 ಪೈಸೆ ಹಾಗೂ ಡೀಸೆಲ್ ದರ 27 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ 82.13 ರೂ. ಹಾಗೂ 72.13 ರೂ. ನಿಗದಿಯಾಗಿದೆ. ಇಂಧನ ದರವು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಾಗಲಿದೆ.
PublicNext
28/11/2020 06:05 pm