ವಿಶ್ವದ 2ನೇ ಅತಿದೊಡ್ಡ ಶ್ರೀಮಂತ ಬಿಲ್ ಗೇಟ್ಸ್ನ ಹಿಂದಿಕ್ಕಿದ ಉದ್ಯಮಿ ಎಲಾನ್ ಮಸ್ಕ್
ಹೌದು ಟೆಸ್ಲಾ ಸಹ ಸಂಸ್ಥಾಪಕ ಎಲಾನ್ ಮಸ್ಕ್ ನ ನಿವ್ವಳ ಸಂಪತ್ತಿನ ಮೌಲ್ಯ 7.2 ಬಿಲಿಯನ್ ಡಾಲರ್ ನಿಂದ 127.9 ಬಿಲಿಯನ್ ಡಾಲರ್ ಗೆ ಏರಿದೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಜಗತ್ತಿನ 500 ಅತಿದೊಡ್ಡ ಶ್ರೀಮಂತರ ಪಟ್ಟಿಯಲ್ಲಿರುವ ಮಸ್ಕ್ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ.
ಕಳೆದ ಜನವರಿಯಲ್ಲಿ 35ನೇ ಸ್ಥಾನದಲ್ಲಿದ ಮಸ್ಕ್ ಈಗ ಏಕಾಏಕಿ 2ನೇ ಸ್ಥಾನಕ್ಕೆ ಏರಿದ್ದು, ಆ ಮೂಲಕ ಎಲಾನ್ ಮಸ್ಕ್ ಕಳೆದ ಸೋಮವಾರ ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.
ಈ ವರ್ಷ ಎಲಾನ್ ಮಸ್ಕ್ ತನ್ನ ನಿವ್ವಳ ಸಂಪತ್ತಿನ ಮೌಲ್ಯಕ್ಕೆ 100.3 ಬಿಲಿಯನ್ ಡಾಲರ್ ನಷ್ಟು ಮೊತ್ತ ಸೇರಿಸಿದ್ದು,ಇದು ಟೆಸ್ಲಾ ಕಂಪನಿಯ ದೊಡ್ಡ ಸಾಧನೆಯಾಗಿದೆ.
ಟೆಸ್ಲಾ ಕಂಪನಿಯ ಆದಾಯವೇ 500 ಬಿಲಿಯನ್ ಡಾಲರ್ ರಷ್ಟಿದೆ. ಬಿಲ್ ಗೇಟ್ಸ್ ಇದೇ ಮೊದಲ ಬಾರಿಗೆ ಎರಡನೇ ಸ್ಥಾನಕ್ಕಿಂತ ಕೆಳ ಹಂತದಲ್ಲಿದ್ದಾರೆ.
ಫಾರ್ಚೂನ್ ವರದಿಯ ಪ್ರಕಾರ, ಬಿಲ್ ಗೇಟ್ಸ್ ದತ್ತಿ ಸಂಸ್ಥೆಗಳಿಗೆ ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡದಿದ್ದರೆ ಅವರ ನಿವ್ವಳ ಸಂಪತ್ತಿನ ಮೌಲ್ಯದಲ್ಲಿ ಕುಸಿತ ಕಂಡು ಬರುತ್ತಿರಲಿಲ್ಲ.
PublicNext
24/11/2020 06:50 pm