ನವದೆಹಲಿ: ಶೈತ್ಯೀಕರಣ ಹೊಂದಿರುವ ಹವಾನಿಯಂತ್ರಣ ಯಂತ್ರ (ಎಸಿ)ಗಳನ್ನು ಆಮದು ಮಾಡಿಕೊಳ್ಳುವುದನ್ನು ಭಾರತ ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.
ದೇಶೀಯ ಉತ್ಪನ್ನಗಳ ಉತ್ತೇಜನ ಮತ್ತು ಅನಿವಾರ್ಯವಲ್ಲದ ವಸ್ತುಗಳ ಆಮದು ಕಡಿತದ ಉದ್ದೇಶದಿಂದ ರೆಫ್ರಿಜರೇಟರ್ ಜೊತೆಗೆ ಎಸಿಗಳನ್ನು ಇತ್ತೀಚಿನ ಆಮದು ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗಿದೆ. ಎಚ್ಎಸ್ ಕೋಡ್‌ಗಳಾದ 84151010 ಮತ್ತು 84151090ರ ಅಡಿಯಲ್ಲಿ ಶೈತ್ಯೀಕರಣ ಹೊಂದಿರುವ ಹವಾನಿಯಂತ್ರಣ ಯಂತ್ರಗಳ ಆಮದನ್ನು ತಕ್ಷಣದಿಂದ 'ನಿಷೇಧಿಸಲಾಗಿದೆ' ಎಂದು ಸಚಿವಾಲಯ ತಿಳಿಸಿದೆ.
PublicNext
16/10/2020 03:30 pm