ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ ಐದು ವರ್ಷಗಳಲ್ಲಿ ಡಿಜಿಟಿಲ್ ಪಾವತಿ ಪ್ರಮಾಣವು ಶೇ 55.1ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಇನ್ನೂ ಆನ್ ಲೈನ್ ಪಾವತಿ ಜತೆಗೆ ವಿವಿಧ ಸೇವೆಗಳು ಕೂಡ ಗಣಣೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಡಿಜಿಟಲ್ ಪಾವತಿಗಳ ಸಂಖ್ಯೆ ವಾರ್ಷಿಕ ಶೇ. 55 ಮತ್ತು ಮೌಲ್ಯ 15% ಹೆಚ್ಚಳವಾಗಿದೆ.
2016ರ ಮಾರ್ಚ್ನಲ್ಲಿ ಡಿಜಿಟಲ್ ಪಾವತಿ ಪ್ರಮಾಣ 594 ಕೋಟಿ ಇತ್ತು.
2020ರ ಮಾರ್ಚ್ ವೇಳೆಗೆ 3,434 ಕೋಟಿಗೆ ಏರಿಕೆ ಆಗಿದೆ.
ಮೌಲ್ಯದ ಲೆಕ್ಕದಲ್ಲಿ ₹ 920 ಲಕ್ಷ ಕೋಟಿಗಳಿಂದ ₹ 1,623 ಲಕ್ಷ ಕೋಟಿಗಳಿಗೆ ಶೇ 15ರಷ್ಟು ಹೆಚ್ಚಾಗಿದೆ ಎಂದು ಆರ್ ಬಿಐ ತಿಳಿಸಿದೆ.
ನಗದುರಹಿತ ಆರ್ಥಿಕತೆ (ನಾನ್ಕ್ಯಾಶ್/ಲೆಸ್-ಕ್ಯಾಶ್ ಎಕಾನಮಿ) ಸೃಷ್ಟಿಸಲು ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ನಾನಾ ಕ್ರಮಗಳನ್ನು ಕೈಗೊಂಡಿದ್ದು, ಅವೆಲ್ಲವೂ ಕಳೆದ 5 ವರ್ಷಗಳಲ್ಲಿಫಲ ನೀಡಿವೆ.
ವರ್ಷ ಡಿಜಿಟಲ್ ಪೇಮೆಂಟ್ ಗಳ ಸಂಖ್ಯೆ ಮೌಲ್ಯ
2016-17 969.12 ಕೋಟಿ 1,120 ಲಕ್ಷ ಕೋಟಿ ರೂ.
2017-18 1,459.01 ಕೋಟಿ 1,369 ಲಕ್ಷ ಕೋಟಿ ರೂ.
2018-19 2,343.40 ಕೋಟಿ 1,638.52 ಲಕ್ಷ ಕೋಟಿ ರೂ.
2019-20 3,434.56 ಕೋಟಿ 1,369.86 ಲಕ್ಷ ಕೋಟಿ ರೂ.
PublicNext
12/10/2020 03:14 pm