ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸೋಮಜಾಳ ಗ್ರಾಮದಲ್ಲಿ ಬಲೆಗೆ ಬಿದ್ದ ಚಿರತೆ

ವಿಜಯಪುರ : ರೈತರಲ್ಲಿ ಭಯ ಮೂಡಿಸಿದ್ದ ಚಿರತೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ. ಹೌದು !

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದ ಸುತ್ತಮುತ್ತ ನಿನ್ನೆ ಮುಂಜಾನೆ ಚಿರತೆ ಕಾಣಿಸಿಕೊಂಡಿತ್ತು.

ವಿಷಯ ತಿಳಿದು ಬೋನು ಇರಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮಜಾಳ ಗ್ರಾಮದ

ಜಮೀನೊಂದರಲ್ಲಿ ಬೋನ ಇಡುವ ಮೂಲಕ ಚಿರತೆ ಸೆರೆಗೆ ಬಲೆ ಬಿಸಿದ್ದರು. ಬೋನು ಇರಿಸಿದ 24 ಗಂಟೆಯಲ್ಲೆ ಚಿರತೆ ಬಲೆಗೆ ಬಿದ್ದಿದೆ.

ಸದ್ಯ ಬಲೆಗೆ ಬಿದ್ದ ಚಿರತೆಯನ್ನ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಜು ಕಲಾಲ

ಪಬ್ಲಿಕ್ ನೆಕ್ಸ್ಟ್‌ ವಿಜಯಪುರ

Edited By : Suman K
Kshetra Samachara

Kshetra Samachara

04/10/2024 03:47 pm

Cinque Terre

18.86 K

Cinque Terre

0