ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸುಟ್ಟು ಕರಕಲಾದ ಓಲಾ ಬೈಕ್.!

ವಿಜಯಪುರ: ಶಾರ್ಟ್‌ ಸರ್ಕ್ಯೂಟ್‌ನಿಂದ ಓಲಾ ಎಲೆಕ್ಟ್ರಿಕ್‌ ಬೈಕ್‌ವೊಂದು ಹೊತ್ತಿ ಉರಿದ ಘಟನೆ ನಗರದ ಇಟ್ಟಂಗಿಹಾಳ ರಸ್ತೆಯಲ್ಲಿ ಘಟನೆ ನಡೆದಿದೆ.

ಇಟ್ಟಿಹಾಳ ನಿವಾಸಿ ಊಗೆಪ್ಪ ಮುಚ್ಚಂಡಿ ಎಂಬುವರ ಸೇರಿದ ಓಲಾ ಬೈಕ್‌ ಎನ್ನಲಾಗಿದ್ದು ಬೈಕ್‌ ಹೊತ್ತಿ ಉರಿಯೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇತ್ತೀಚೆಗಷ್ಟೆ ಊಗೆಪ್ಪ, ಓಲಾ ಎಲೆಕ್ಟ್ರಿಕ್‌ ಬೈಕ್‌ ಖರೀದಿಸಿದ್ದರು. ಬೈಕ್‌ ನ ಬ್ಯಾಟರಿ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೈಕ್‌ ಹೊತ್ತಿ ಉರಿದು ಹೋಗಿದೆ..

Edited By : Vinayak Patil
PublicNext

PublicNext

20/12/2024 02:57 pm

Cinque Terre

15.8 K

Cinque Terre

0