", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737264923-round.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬೀದರ್ ಮತ್ತು ಮಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಬೆನ್ನಲೆ ಬೆಂಗಳೂರಿನಲ್ಲಿ ಖಾಕಿ ಅಲರ್ಟ್ ಗೆ ಸೂಚಿಸಿದ ಪೊಲೀಸ್ ಕಮಿಷನರ್ ಸಿಟಿ ...Read more" } ", "keywords": ",Bidar,Law-and-Order", "url": "https://publicnext.com/article/nid/Bidar/Law-and-Order" } ಬೀದರ್, ಮಂಗಳೂರು ದರೋಡೆ ಬೆನ್ನಲ್ಲೆ ಸಿಟಿ ಪೊಲೀಸ್ರು ಅಲರ್ಟ್ : ನೈಟ್ ರೌಂಡ್ ಮಾಡಿದ ಕಮಿಷನರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್, ಮಂಗಳೂರು ದರೋಡೆ ಬೆನ್ನಲ್ಲೆ ಸಿಟಿ ಪೊಲೀಸ್ರು ಅಲರ್ಟ್ : ನೈಟ್ ರೌಂಡ್ ಮಾಡಿದ ಕಮಿಷನರ್

ಬೆಂಗಳೂರು : ಬೀದರ್ ಮತ್ತು ಮಂಗಳೂರಿನಲ್ಲಿ ದರೋಡೆಕೋರರ ಅಟ್ಟಹಾಸ ಬೆನ್ನಲೆ

ಬೆಂಗಳೂರಿನಲ್ಲಿ ಖಾಕಿ ಅಲರ್ಟ್ ಗೆ ಸೂಚಿಸಿದ ಪೊಲೀಸ್ ಕಮಿಷನರ್ ಸಿಟಿ ರೌಂಡ್ಸ್ ನಡೆಸಿದ್ದಾರೆ. ನೈಟ್ ರೌಡ್ ಮಾಡಿದ ಕಮಿಷನರ್ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿ ಸ್ಪೆಷಲ್ ರೌಂಡ್ಸ್ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತರು, ಸಿಸಿಬಿ ಡಿಸಿಪಿಗಳು ಸೇರಿದಂತೆ , ನಗರದ ಎಲ್ಲಾ ವಿಭಾಗದ ಡಿಸಿಪಿಗಳಿಂದ ರೌಂಡ್ಸ್ ನಡೆಸಿದ್ದಾರೆ. ಒಂದೊಂದು ಪೊಲೀಸ್ ಠಾಣಾ ವ್ಯಾಪ್ತಿಗೆ ಓರ್ವ ಹಿರಿಯ ಅಧಿಕಾರಿ ಭೇಟಿ ನೀಡಿದ್ದಾರೆ. ಸದಾಶಿವ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರ್ ರೌಂಡ್ಸ್ ನಡಸಿದ್ದಾರೆ.

ಸದಾಶಿವ ನಗರ ಠಾಣೆಗೆ ಬೆಂಗಾವಲು ಪಡೆಯ ವಾಹನವನ್ನ ಖುದ್ದು ಕಮಿಷನರ್ ಚಾಲನೆ ಮಾಡಿಕೊಂಡು ಬಂದಿದ್ದಾರೆ. ಸ್ಟೇಷನ್ ನಲ್ಲಿ ಕುಳಿತು ಎಲ್ಲಾ ಡಿಸಿಪಿಗಳೂ ರೌಂಡ್ಸ್ ನಲ್ಲಿ ಎಲ್ಲಿದ್ದಾರೆಂದು ಮಾಹಿತಿ ಪಡೆದು, ಆಯಾ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಮಾಡಬೇಕು. ನೈಟ್ ಡ್ಯೂಟಿಯಲ್ಲಿ ಇರುವ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬೇಕು ಎಂದು ಸೂಚಿಸಿದ್ದಾರೆ‌.

Edited By : Ashok M
PublicNext

PublicNext

19/01/2025 11:05 am

Cinque Terre

34.63 K

Cinque Terre

0