ಬೀದರ್ : ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ನಗರಸಭೆ ಅನೇಕ ಜಾಗೃತಿ ಕಾರ್ಯಕ್ರಮ ಕೈಗೊಂಡರು ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲುತ್ತಿಲ್ಲ, ಇದೀಗ ಅಂತಹ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ ಮುಂಗಟ್ಟುಗಳಿಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ನಗರದ ಗಾಂಧಿ ಗಂಜ್, ಮೋಹನ್ ಮಾರ್ಕೆಟ್, ಉಸ್ಮಾನ್ ಗಂಜ್ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಸಂಚರಿಸಿದ ಪೌರಾಯುಕ್ತ ಶಿವರಾಜ್ ರಾಥೋಡ್ ನೇತೃತ್ವದ ತಂಡ ಕಿರಾಣಿ ಶಾಪ್, ಮಾಲ್‌ಗಳ ಮೇಲೆ ದಾಳಿ ನಡೆಸಿದರು. ಪ್ಲಾಸ್ಟಿಕ್ ವಸ್ತುಗಳನ್ನಿಟ್ಟು ಮಾರಾಟ ಮಾಡ್ತಿದ್ದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಪ್ಲಾಸ್ಟಿಕ್ ಗ್ಲಾಸ್, ಸೇರಿದಂತೆ ಕ್ಯಾರಿಬ್ಯಾಗ್‌ಗಳನ್ನ ಮಾರಾಟ ಮಾಡದಂತೆ ಸೂಚನೆ ನೀಡಿದರು..ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಪರಿಸರ ಸಹಕಾರಿ ಇರುವ ವಸ್ತುಗಳನ್ನ ಮಾರಾಟ ಮಾಡಿ, ಪರಿಸರಕ್ಕೆ ವಿನಾಶಕಾರಿಯಾಗುವ ಪ್ಲಾಸ್ಟಿಕ್ ವಸ್ತುಗಳನ್ನ ಮಾರಾಟ ಮಾಡಬೇಡಿ ಎಂದು ತಿಳಿ ಹೇಳಿದ್ದಾರೆ.
ವರದಿ:ಯೋಹಾನ್ ಪಿ ಹೊನ್ನಡ್ಡಿ ಬೀದರ್
PublicNext
14/11/2024 03:03 pm