ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಗುಡ್ಡದ ಮಲ್ಲಯ್ಯ ಉತ್ಸವ - ಬಡಿಗೆ ಬಡಿದಾಟ 92 ಮಂದಿಗೆ ಗಾಯ

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಗಡಿ ಭಾಗದಲ್ಲಿ ಕರ್ನಾಟಕ ರಾಜ್ಯದ ಸಾವಿರಾರು ಕುಟುಂಬಗಳಿಗೆ ಮನೆದೇವರಾಗಿರುವ ದೇವರು ಗುಡ್ಡದ ಸುತ್ತಮುತ್ತಲಿನ 10ಹಳ್ಳಿಗಳ ನಡುವೆ ಬೆಟ್ಟದ ತುದಿಯಲ್ಲಿ ನೆಲೆಸಿದ್ದು, ಆರಾಧ್ಯ ದೈವ ಗುಡ್ಡದ ಮಲ್ಲಯ್ಯ ಮಾಳಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವವು ಪ್ರತಿವರ್ಷದಂತೆ ಸೀಮೋಲ್ಲಂಘನ, ಶಮಿವೃಕ್ಷಕ್ಕೆ ಪೂಜೆ ಹಾಗೂ ಕಾರಣಿಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ವಿಜಯದಶಮಿಯಂದು ರಾಕ್ಷಸರ ಸಂಹಾರಕ್ಕೆ ಮಾಳಮ್ಮ ಜೊತೆಯಲ್ಲಿ ತೆರಳುವ ಮಲ್ಲೇಶ್ವರ ಸ್ವಾಮಿಯ ಜತೆಗೆ ಸುತ್ತಲಿನ ಗ್ರಾಮಗಳ 50ಸಾವಿರಕ್ಕೂ ಹೆಚ್ಚು ಯುವಕರು ಕೈಯಲ್ಲಿ ಬಡಿಗೆಗಳನ್ನು ಹಿಡಿದು ತೆರಳುವುದರಿಂದ ಒಂದೇ ಸಾರಿ ಸಾವಿರಾರು ಜನರು ರಾತ್ರಿ 12ಗಂಟೆಯಿಂದಲೇ ಕೈಯಲ್ಲಿ ಪಂಜು, ಬಡಿಗೆಗಳನ್ನು ಹಿಡಿದುಕೊಂಡು ಉತ್ಸವ ಮೂರ್ತಿಯನ್ನು ಹೊತ್ತೊಕೊಂಡು ಡೊಳ್ಳು ಮುಂತಾದ ವಾದ್ಯಗಳೊಂದಿಗೆ ಯುದ್ಧಕ್ಕೆ ಹೊರಡುವ ಹುಮ್ಮಸ್ಸಿನಿಂದ ತೆರಳುವುದು ನೋಡುವುದೇ ರೋಮಾಂಚನ ಉಂಟುಮಾಡುತ್ತದೆ.

ಬಿಡಿಗೆಗಳ ಹೊಡೆದಾಟದ ಸದ್ದಿಗೆ ಗುಡ್ಡವೆಲ್ಲಾ ಪ್ರತಿಧ್ವನಿಸುತ್ತದೆ. ಪಂಜನ್ನು ಎಸೆಯುತ್ತಾ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಬೇಕೆನ್ನುವ ಹೋರಾಟದಲ್ಲಿ ಅನೇಕರಿಗೆ ಗಾಯಗಳು ಸಂಭವಿಸಿದರು ಬಂಡಾರವನ್ನು ಲೇಪಿಸಿಕೊಂಡು ಮತ್ತೆ ಕಾಳಗಕ್ಕೆ ಅಣಿಯಾಗುವುದರಿಂದಲೇ ಈ ಹಬ್ಬವು ದೇಶದ್ಯಂತ ವಿಶೇಷ ಹಬ್ಬವಾಗಿ ಕಾಣುತ್ತಿದ್ದು, 50ಸಾವಿರಕ್ಕೂ ಹೆಚ್ಚು ಭಕ್ತರನ್ನು ಪ್ರತಿವರ್ಷವೂ ತನ್ನಕಡೆಗೆ ಆಕರ್ಷಿಸುತ್ತದೆ.

ಈ ವರ್ಷದ ಕಾರಣಿಕೆ ಭವಿಷ್ಯ ನುಡಿದ ಗೊರವಯ್ಯ ದೇಶಕ್ಕೆ ಮಲ್ಲಿಗೆ ಹೂ ಒಗದಳಾ, ದಿಕ್ಕಿ ದಾನ ಮಾಡಬೇಕು, ಗಂಗೆ ಹೊಳೆದಂಡಿಗೆ ನಿಂತಾಳ, ನಿಂತು ಬರುತ್ತಾಳ, ನಗಳ್ಳ(ಹತ್ತಿ) 6700, ವಕ್ರ ಜೋಳ 3400, 3-6ಆದಿತ್ತು, 6-3 ಆದಿತ್ತು ಬಹುಪಾರಕ್ ಎಂದರು.

Edited By : Ashok M
PublicNext

PublicNext

14/10/2024 09:03 am

Cinque Terre

35.91 K

Cinque Terre

1