ಸಂಡೂರು: ಸಂಡೂರಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪ್ರಚಾರ ಜೋರಾಗಿದೆ. ಎಲ್ಲೆಡೆಯೂ ಕಾಂಗ್ರೆಸ್ ಪರ ಅಲೆಯಿದ್ದು, ಕಾಂಗ್ರೆಸ್ಸಿನ ಅಭೂತಪೂರ್ವ ಸಾಧನೆಯಿಂದ ಜನರು ಮತ್ತೊಮ್ಮೆ ಸಂಡೂರಿನ ನೆಲದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಇದೆಲ್ಲದಕ್ಕೂ ಸಚಿವ ಸಂತೋಷ ಲಾಡ್ ಅವರ ನೇತೃತ್ವದ ಕಾರ್ಯವೇ ಸಾಕ್ಷಿಯಾಗಿದೆ.
ಸಂಡೂರಿನ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ದಿನವೂ ಸಿಎಂ ಸಿದ್ಧರಾಮಯ್ಯನವರಿಂದ ಅಬ್ಬರದ ಪ್ರಚಾರ ನಡೆದಿದ್ದು, ಮೆಟ್ರಿಕಿ ಹಾಗೂ ವಿಠ್ಠಲಪುರ ಗ್ರಾಮದಲ್ಲಿ ನಡೆದ ಮಹತ್ವದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರವಾಗಿ ಸಿಎಂ ಸಿದ್ಧರಾಮಯ್ಯನವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಹೌದು... ಸಚಿವ ಸಂತೋಷ ಲಾಡ್ ಸಾರಥ್ಯದಲ್ಲಿ ನಡೆಯುತ್ತಿರುವ ಪ್ರಚಾರ ಸಭೆಗೆ ನಿಜಕ್ಕೂ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತವಾಗುತ್ತಿದೆ. ಸಂತೋಷ ಲಾಡ್ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ ಎಂಬುವಂತೇ ಜನಸ್ತೋಮ ನೆರೆದಿದೆ.
ಇನ್ನೂ ಕಳೆದ ದಿನಗಳಿಂದಲೂ ಕಾಂಗ್ರೆಸ್ ಗೆ ಸಾಕಷ್ಟು ಜನ ಬೆಂಬಲ ದೊರೆತಿರುವುದು ನಿಜಕ್ಕೂ ಸಚಿವ ಸಂತೋಷ ಲಾಡ್ ಅವರ ದಕ್ಷತೆಯ ಕಾರ್ಯವೈಖರಿಗೆ ಸಾಕ್ಷಿ. ಸಹೃದಯತೆಯಿಂದ ಜನರನ್ನು ಸೆಳೆಯುವ ಜನ ನಾಯಕ ಸಂತೋಷ ಲಾಡ್ ಎಂಬುದು ಅತಿಶಯೋಕ್ತಿಯಲ್ಲ.
PublicNext
09/11/2024 05:13 pm