ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ತಮ್ಮ ಡೈರಿಯ ಹಸುಗಳನ್ನ ನೆನೆದು ಭಾವುಕರಾದ ವಿನಯ ಕುಲಕರ್ಣಿ

ಬೆಳಗಾವಿ: ನಾನೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ಮುಖ್ಯವಾಗಿ ನಾನೊಬ್ಬ ರೈತ, ನನ್ನ ನೋವು ನನಗೆ ಗೊತ್ತು. ನಿಮ್ಮ ಮನೆಯಲ್ಲಿ ಎರಡು ಮೂರು ಆಕಳು ಇದ್ರೆ ಮೆಂಟೇನ್ ಮಾಡೋಕೆ ಆಗುತ್ತಾ? ನನ್ನ ಬಳಿ ಸಾವಿರಾರು ದನಗಳಿವೆ, ಊರಿಂದ ಹೊರಗಿದ್ದು ಮೆಂಟೇನ್ ಮಾಡಲು ಎಷ್ಟು ಕಷ್ಟ ಆಗುತ್ತಿರಬಹುದು. ನನ್ನ ಮಕ್ಕಳಿಗಿಂತ ಹೆಚ್ಚು ನಾನು ಅವುಗಳನ್ನು ಸಾಕಿದ್ದೇನೆ. ಅವುಗಳಿಂದ ದೂರ ಇದ್ದು ಎಷ್ಟು ನೋವಾಗುತ್ತಿರಬಹುದು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರು ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನ ನೆನೆದು ಭಾವುಕರಾದರು.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಐದರಿಂದ 8 ಗಂಟೆಯವರೆಗೂ ಫಾರ್ಮ್‌ನಲ್ಲಿ ಡ್ಯೂಟಿ ಮುಗಿಸುತ್ತಿದ್ದೆ. ಹಂಡ್ರೆಡ್ ಪರ್ಸೆಂಟ್ ನನಗೆ ತುಂಬಾ ನೋವಾಗುತ್ತದೆ, ಹರ್ಟ್ ಆಗುತ್ತದೆ. ನಾನೇನ್ ಟೆರರಿಸ್ಟೋ ಏನೋ ರಾಜ್ಯದಿಂದ, ಜಿಲ್ಲೆಯಿಂದ ಹೊರಗೆ ಇಡೋಕೆ.? ಇದನ್ನೆಲ್ಲ ನೋಡಿದಾಗ ತುಂಬಾ ನೋವಾಗುತ್ತದೆ. ಸಚಿವನಾದಾಗ ಬೆಂಗಳೂರು ಪ್ರವಾಸದಲ್ಲಿದ್ದಾಗ ಬಿಟ್ರೆ ಬೆಳಗ್ಗೆ 5 ಗಂಟೆಗೆ ನನ್ನ ಫಾರ್ಮ್‌ಗೆ ಹೋಗ್ತಿದ್ದೆ. ಇವತ್ತಿನವರೆಗೂ ನನ್ನ ಒಂದು ಎಕರೆ ಜಮೀನು ಲಾವಣಿ ಮಾಡಲು ಕೊಟ್ಟಿಲ್ಲ. ಇವತ್ತಿಗೂ ಅಗ್ರಿಕಲ್ಚರ್ ನಾನೇ ಮಾಡ್ತೀನಿ. ನನ್ನ ಹಸುಗಳು, ಡೈರಿ ಫಾರ್ಮ್ ನಾನೇ ಮೆಂಟೇನ್ ಮಾಡ್ತೀನಿ ಎಂದು ಹೇಳಿದರು. ‌

ನನ್ನ ಫಾರ್ಮ್‌ನಲ್ಲಿ ಐದು ಸಾವಿರ ಜಾನುವಾರು ಇವೆ. ಇದನ್ನೆಲ್ಲ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತೆ. ಸದ್ಯ ಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ. ಎರಡು ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ. ಅಂತದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ರೆ ಮುಖ ಪ್ರಾಣಿಗಳ ಕಥೆ ಏನು ಎಂದು ವಿನಯ್ ಕುಲಕರ್ಣಿ ಭಾವುಕರಾದರು.

Edited By : Manjunath H D
PublicNext

PublicNext

08/10/2022 09:48 pm

Cinque Terre

41.46 K

Cinque Terre

10

ಸಂಬಂಧಿತ ಸುದ್ದಿ