ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಶಾಲೆಗೆ ಚಕ್ಕರ್ ಹೊಡಿಯುವ ಮಾಸ್ತರ್ ಗಳಿಗೆ ತಕ್ಕ ಶಾಸ್ತಿ : ಸಚಿವ ಬಿಸಿ ನಾಗೇಶ್

ಬೆಳಗಾವಿ: ಮರಾಠಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ತುಂಬಾ ಕಡಿಮೆಯಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಿ ಶಾಲೆಯಲ್ಲಿರುವ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಭಾಷೆ ಕಲಿಯಬೇಕೆಂಬ ಆಸಕ್ತಿ ಹೆಚ್ಚಾಗಿದೆ. ಈ ಕುರಿತು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರೊಂದಿಗೆಯೂ ಮಾತುಕತೆ ಮಾಡಿದ್ದೇನೆ ಎಂದು ತಿಳಿಸಿದರು. ಇದೆ ವೇಳೆ ಖಾನಾಪುರದ ಶಾಲೆಗಳಿಗೆ ರಸ್ತೆಗಳ ದುರಸ್ತಿ ಮಾಡಲು ಸಮರ್ಪಕವಾದ ಅನುಧಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಹೇಳಿಕೆಗೆ ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ, ಸತ್ಯಕ್ಕೆ ದೂರವಾದ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಟ್ಟು 48 ಸಾವಿರ ಶಾಲೆಗಳನ್ನು ನಡೆಸುತ್ತಿದ್ದೇವೆ. 77 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇವೆ. ಬೆಟ್ಟ, ತೋಟದ ಮನೆಯಲ್ಲಿ ಶಾಲೆಗಳಿವೆ ಎನ್ನುವ ಆರೋಪವೂ ಇದೆ. ಇದಕ್ಕೆ ನಾವು ಎರಡ್ಮೂರು ಯೋಚನೆ ಮಾಡುತ್ತೇವೆ. ಶಿಕ್ಷಕರನ್ನು ಪರೀಕ್ಷೆಯ ಮೂಲಕ ಸರಿ ಮಾಡುವುದು ತಾತ್ವಿಕವಾಗಿ ಸರಿಯಲ್ಲ. ಆದರೂ ಈಗೀನ ತಂತ್ರಜ್ಞಾನ ಉಪಯೋಗಿಸಿ ಮಾಡೋಣ ಎಂದರೆ ಬೇಕಾದಷ್ಟು ಕಡೆ ನೆಟ್ ಇಲ್ಲ. ಯಾರು ಒಳ್ಳೆಯವರಿದ್ದಾರೆ ಅವರು ಶಾಲೆಗೆ ಬಂದೆ ಬರುತ್ತಾರೆ. ಕೆಲ ಶಿಕ್ಷಕರು ಶಾಲೆ ಮುಗಿಯುವ ಮುನ್ನವೇ ಮನೆಗೆ ಹೋಗುವವರಿದ್ದಾರೆ. ಅಂಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿ ತಾಲೂಕಿನಲ್ಲಿ ಶಿಕ್ಷಕರು ಶಾಲೆಗೆ ಚಕ್ಕರ ಹಾಕಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಖಚಿತವಾದ ಮಾಹಿತಿ ನೀಡಿದರೆ ಅಂಥ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

Edited By : Nagesh Gaonkar
PublicNext

PublicNext

17/09/2022 05:48 pm

Cinque Terre

31.82 K

Cinque Terre

1

ಸಂಬಂಧಿತ ಸುದ್ದಿ