ಬೆಳಗಾವಿ: ಸಿಎಂ ಬಂದು ನಮ್ಮ ಮನವಿ ಸ್ಪಂದಿಸಬೇಕೆಂದು ನಾವೂ ಕರೆ ನೀಡಿದ್ದೇವೂ, ಆದರೆ ಸಿಎಂ ನಮಗೆ ಸ್ಪಂದಿಸದ ಹಿನ್ನೆಲೆ ಸುವರ್ಣ ಸೌಧ ಮುತ್ತಿಗೆ ಹಾಕಲು ಮುಂದಾಗಿದ್ದೇವೆ. ನಮ್ಮ ಟ್ಯಾಕ್ಟರ್ ಹಾಗೂ ಹೋರಾಟಗಾರರನ್ನು ತಡೆದು ನಿರ್ಬಂಧ ಹೇರಿದರು. ನಮ್ಮ ಹೋರಾಟದಿಂದ ಸಿಎಂ ಹತಾಷರಾಗಿದ್ದಾರೆ. ಸಿಎಂ ಹಾಗೂ ಪೊಲೀಸರು ಪ್ರೀ ಪ್ಲ್ಯಾನ್ ಮಾಡಿ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಚನ್ನಮ್ಮ ವೃತ್ತದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದು ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು, ಸಿಎಂ ವೇದಿಕೆಗೆ ಬಂದು ಸ್ಪಷ್ಟವಾಗಿ ಭರವಸೆ ನೀಡಿ ಅಂತಾ ಹೇಳಿದ್ವಿ, ಆದರೆ ಸಿಎಂ ಬರದೆ ಸರ್ಕಾರದ ಪರವಾಗಿ 3 ಸಚಿವರನ್ನು ಕಳುಸಿದ್ದರು. ಸಿಎಂ ಬರುವರೆಗೂ ನಾವೂ ಬಿಡಲ್ಲ ಎಂದು ಹೋರಾಟಗಾರರು ಹೇಳಿದರು. ಹೀಗಾಗಿ ಸಿಎಂ ಸ್ಥಳಕ್ಕೆ ಹೋಗಲು ಯತ್ನಿಸಿದ್ದೇವೆ ಎಂದರು.
ಲಿಂಗಾಯತರ ಮೇಲೆ ಯಾವ ಸರ್ಕಾರ ಕೂಡಾ ಹಲ್ಲೆ ಮಾಡಿರಲಿಲ್ಲ, ಈ ಸರ್ಕಾರ ನಮ್ಮ ಮೇಲೆ ಗೋಲಿಬಾರ್ ಬಾಡಲು ಹೇಸುವುದಿಲ್ಲ. ನಿಮ್ಮ ಸರ್ಕಾರದಿಂದ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿ, ಇಲ್ಲವಾದರೆ ನಮಗೆ ಯಾರ ನ್ಯಾಯ ಒದಗಿಸುತ್ತಾರೋ ಆ ಸರ್ಕಾರ ತರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಇದೇ 12ನೇ ತಾರೀಖು ಪ್ರತಿ ಗ್ರಾಮದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ. ಲಾಠಿ ಚಾರ್ಜ್ಗೆ ಜಗ್ಗಲ್ಲ-ಬಗ್ಗಲ್ಲ, ಸಿಎಂ ಬರೋವರೆಗೂ ಹೋರಾಟ ನಿಲ್ಲಲ್ಲ, ಎಂದು ತಿಳಿಸಿದರು.
PublicNext
10/12/2024 09:14 pm